Publish Date: Thu, 25 Apr 2019 (08:08 IST)
Updated Date: Thu, 25 Apr 2019 (08:09 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಬ್ಬರೂ ಎಟಿಎಂ ಮಿಷನ್ ನಿಂದ ಹಣ ಡ್ರಾ ಮಾಡಿಕೊಳ್ಳುವುದು ಸಾಮಾನ್ಯ. ಇದರಿಂದ ಬ್ಯಾಂಕ್ ವ್ಯವಹಾರವೇನೋ ಸುಲಭವಾಗಿದೆ.
ಆದರೆ ನೀವು ಬಳಸುವ ಎಟಿಎಂ ಮಿಷನ್ ಎಷ್ಟು ಗಲೀಜು ಎಂದು ನಿಮಗೆ ಗೊತ್ತಾ? ಇದು ನಿಮ್ಮ ಟಾಯ್ಲೆಟ್ ಸೀಟ್ ನಷ್ಟೇ ಕೊಳಕು ಎಂದು ಬ್ರಿಟಿಷ್ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಎಟಿಎಂ ಮಿಷನ್ ನ್ನು ಎಷ್ಟೋ ಜನ ಬಳಕೆ ಮಾಡುತ್ತಾರೆ. ಇದರ ಕೀ ಬೋರ್ಡ್ ಮೇಲೆ ಎಷ್ಟೋ ಜನ ಬೆರಳಾಡಿಸುತ್ತಾರೆ. ಹೀಗಾಗಿ ಈ ಮಿಷನ್ ಸಾರ್ವಜನಿಕ ಟಾಯ್ಲೆಟ್ ನಷ್ಟೇ ಗಲೀಜಾಗಿರುತ್ತದೆ. ಇದರಿಂದ ವಾಂತಿ ಬೇಧಿಯಂತಹ ಆರೋಗ್ಯ ಸಮಸ್ಯೆ ಬರಬಹುದು ಎಂದು ಅಧ್ಯಯನಕಾರರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ