ವಯಸ್ಸು 30 ದಾಟಿದ ನಂತರವೂ ಸೌಂದರ್ಯ ಕಾಪಾಡಿಕೊಳ್ಳಬೇಕಾ. ಹಾಗಾದ್ರೆ ಈ ಆಹಾರವನ್ನು ಸೇವಿಸಿ

ಮಂಗಳವಾರ, 23 ಏಪ್ರಿಲ್ 2019 (07:17 IST)
ಬೆಂಗಳೂರು : ಮಹಿಳೆಯರ ವಯಸ್ಸು 30 ದಾಟಿದ ನಂತರ ಅವರ  ಆರೋಗ್ಯದ ಜೊತೆಗೆ ಸೌಂದರ್ಯವೂ ಕ್ಷೀಣಿಸುತ್ತಾ ಹೋಗುತ್ತದೆ. ಇದಕ್ಕೆ ಮುಖ್ಯ ಕಾರಣ ಹಾರ್ಮೋನುಗಳ ಏರುಪೇರು.  ಇಂತಹ ಮಹಿಳೆಯರು ತಮ್ಮ ಆರೋಗ್ಯ ಹಾಗೂ ಸೌಂದರ್ಯವನ್ನು ಕಾಪಾಡಿಕೊಳ್ಳಲು ಈ ಆಹಾರ ಕ್ರಮಗಳನ್ನು ಅನುಸರಿಸಿ.

ವಯಸ್ಸು 30 ದಾಟಿದ ನಂತರ ಮೀನುಗಳನ್ನು ಅತಿಯಾಗಿ ಸೇವಿಸಬೇಕಂತೆ. ಇಂಗ್ಲೆಂಡಿನಲ್ಲಿ ನಡೆಸಿರುವಂತಹ ಒಂದು ಅಧ್ಯಯನದ ಪ್ರಕಾರ ಮೀನು ಸೇವನೆ ಮಾಡಿದರೆ ಮೂಳೆಗಳ ಆರೋಗ್ಯ ಸುಧಾರಣೆ ಆಗುತ್ತವೆ. ಮೀನು ತಿನ್ನುವುದರಿಂದಾಗಿ ಕಾರ್ಟಿಲೆಜ್ ಅವನತಿ ತಡೆಯಬಹುದು ಮತ್ತು ಉರಿಯೂತ ಕಡಿಮೆ ಮಾಡಿಕೊಳ್ಳಬಹುದು. ಇದರಿಂದಾಗಿ ಮೂಳೆಗಳು ತುಂಬಾ ಆರೋಗ್ಯವಾಗಿ ಇರಲಿದೆ.

 

ಬೀಜಗಳಲ್ಲಿ ವಿಟಮಿನ್ ಇ ಸಮೃದ್ಧವಾಗಿದೆ. ಮತ್ತು ಇದು ಪ್ರತಿರೋಧಕ ವ್ಯವಸ್ಥೆ ಆರೋಗ್ಯ ಹಾಗೂ ಬಲಿಷ್ಠವಾಗಿ ಇಡಲಿದೆ. ಬೀಜಗಳಲ್ಲಿ ವಿಟಮಿನ್ ಬಿ ಕೂಡ ಸಮೃದ್ಧವಾಗಿದ್ದು, ಇದು ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡಲು ನೆರವಾಗಲಿದೆ. ಇದರಿಂದ ಹೃದಯದ ಕಾಯಿಲೆಗಳು ಬೆಳೆಯುವಂತಹ ಸಾಧ್ಯತೆ ಕಡಿಮೆ ಆಗುವುದು.

 

30ರ ವಯಸ್ಸು ದಾಟಿದ ಕೂಡಲೇ ಮುಖದಲ್ಲಿ ನೆರಿಗೆಗಳು ಕಾಣಲು ಆರಂಭಿಸುತ್ತವೆ. ಆಸ್ಟ್ರೇಲಿಯಾದ ವಿಜ್ಞಾನಿಗಳು ನಡೆಸಿರುವಂತಹ ಅಧ್ಯಯನವೊಂದರ ಪ್ರಕಾರ ಕಾಳುಗಳನ್ನು ತಿನ್ನುವಂತಹ ಮಹಿಳೆಯರ ಮುಖದಲ್ಲಿ ನೆರಿಗೆ ಮೂಡುವುದು ಕಡಿಮೆ. ಮತ್ತು ಅವರಿಗೆ ಬಿಸಿಲಿಗೆ ಸಂಬಂಧಿಸಿದ ಯಾವುದೇ ರೀತಿಯ ಹಾನಿಯೂ ಆಗದು. ಆರೋಗ್ಯಕರ ಚರ್ಮಕ್ಕೆ ಇದು ನೆರವಾಗುವುದು ಮತ್ತು ಚರ್ಮದ ರಕ್ಷಣೆ ಮಾಡುವುದು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಈ ವಯಸ್ಸಿನ ಮಕ್ಕಳಿಗೆ ಜೇನುತುಪ್ಪ ನೀಡಿದರೆ ಜೀವಕ್ಕೆ ಆಪತ್ತು