ಧರ್ಮಸ್ಥಳ ದೇವರ ದರ್ಶನ ಮಾಡಿಸುವ ನೆಪದಲ್ಲಿ ಪತಿ ಪತ್ನಿಗೆ ಮಾಡಿದ್ದಾನೆ ಇಂತಹ ವಂಚನೆ

ಸೋಮವಾರ, 22 ಏಪ್ರಿಲ್ 2019 (08:36 IST)
ಬೆಂಗಳೂರು : ಧರ್ಮಸ್ಥಳ ದೇವರ ದರ್ಶನ ಮಾಡಿ ಮರಳಿ ಬರುವಾಗ  ಪತಿಯೊಬ್ಬ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ನವೀನ್, ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ವ್ಯಕ್ತಿ. ಪದೇ ಪದೇ ಪತ್ನಿಗೆ ವರದಕ್ಷಿಣೆ ಕೊಡುವಂತೆ ಕಿರುಕುಳ ನೀಡುತ್ತಿದ್ದ ಈತ ಮೂರು ದಿನಗಳ ಹಿಂದೆ ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಮಾಡಿಕೊಂಡು ಬರುವ ನೆಪ ಹೇಳಿ ಪತ್ನಿಯನ್ನು ಕರೆದುಕೊಂಡು ಹೋಗಿ ದೇವರ ದರ್ಶನ ಮಾಡಿ ಮರಳಿ ಬರುವಾಗ ಏಕಾಏಕಿ ರಾಡ್ ನಿಂದ ಹೊಡೆದು ಪತ್ನಿಯನ್ನು ಕೊಲೆ  ಮಾಡಲು ಪ್ರಯತ್ನಿಸಿದ್ದಾನೆ.


ಈ ವೇಳೆ ಪತ್ನಿ ಅದೃಷ್ಟವಶಾತ್ ನವೀನ್ ಕೈಯಿಂದ ತಪ್ಪಿಸಿಕೊಂಡು ಬಂದು ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ ಬಳಿಕ ತನ್ನ ಪೋಷಕರಿಗೆ  ಮಾಹಿತಿ ನೀಡಿದ್ದಾಳೆ. ತಕ್ಷಣ ಪೋಷಕರು ಈ ಕುರಿತು ನೆಲಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ನವೀನ್‍ನನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ. 
 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬ್ಯಾಂಕ್‍ ಗಳು ವಾರಕ್ಕೆ 5 ದಿನ ಮಾತ್ರವೇ ಕೆಲಸ ನಿರ್ವಹಿಸಲಿವೆ ಎಂಬುದು ಫೇಕ್ ನ್ಯೂಸ್ - ಆರ್.​ಬಿ.ಐ ಸ್ಪಷ್ಟನೆ