ಗರ್ಭಿಣಿಯರು ಶಾರೀರಿಕ ಸಂಬಂಧ ಬೆಳೆಸುವ ಮುನ್ನ ಈ ವಿಚಾರ ತಿಳಿದಿರಲಿ

ಸೋಮವಾರ, 22 ಏಪ್ರಿಲ್ 2019 (04:58 IST)
ಬೆಂಗಳೂರು : ಗರ್ಭಿಣಿಯರು ಶಾರೀರಿಕ ಸಂಬಂಧ ಬೆಳೆಸಬಹುದು,  ಆದರೆ ಗರ್ಭಿಣಿಯರು ಆರೋಗ್ಯದ ಬಗ್ಗೆ ಕೆಲವು ಮುನ್ನೆಚ್ಚರಿಕೆ ತೆಗೆದುಕೊಂಡು ಸಂಬಂಧ ಬೆಳೆಸುವುದು ಉತ್ತಮವೆಂದು ಎಂದು ವೈದ್ಯರು ಹೇಳುತ್ತಾರೆ.


ಹೌದು. ಗರ್ಭಿಣಿಯರು ಶಾರೀರಿಕ ಸಂಬಂಧ ಬೆಳೆಸುವ ವೇಳೆ ರಕ್ತಸ್ರಾವವಾದ್ರೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಉತ್ತಮ. ಹಾಗೇ ಸಂಗಾತಿ ಲೈಂಗಿಕ ಸಮಸ್ಯೆ ಅಥವಾ ರೋಗದಿಂದ ಬಳಲುತ್ತಿದ್ದರೆ ಗರ್ಭಿಣಿಯರು ಶಾರೀರಿಕ ಸಂಬಂಧ ಬೆಳೆಸದಿರುವುದು ಒಳ್ಳೆಯದು.


ಅಷ್ಟೇ ಅಲ್ಲದೇ ಶಾರೀರಿಕ ಸಂಬಂಧದ ವೇಳೆ ಹೆಚ್ಚಿಗೆ ಒತ್ತಡ ನೀಡಬಾರದು. ಇದು ಗರ್ಭಿಣಿ ಹಾಗೂ ಮಗು ಇಬ್ಬರಿಗೂ ಅಪಾಯವಾಗುವ ಸಾಧ್ಯತೆಯಿರುತ್ತದೆ. ಗರ್ಭಪಾತಕ್ಕೂ ಕಾರಣವಾಗಬಹುದು. ಶಾರೀರಿಕ ಸಂಬಂಧದ ವೇಳೆ ಕಾಂಡೋಮ್ ಬಳಸುವುದು ಬಹಳ ಮುಖ್ಯ. ಇದು ಸೋಂಕು ಹರಡದಂತೆ ತಡೆಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಭಗವಂತ ಪರ ಮತಯಾಚಿಸಿದ ಸಿಂಹ