Select Your Language

Notifications

webdunia
webdunia
webdunia
Saturday, 12 April 2025
webdunia

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟ; ರಾಜ್ಯದಲ್ಲಿ ಹೈ ಅಲರ್ಟ್

ಸರಣಿ ಬಾಂಬ್
ಹುಬ್ಬಳ್ಳಿ , ಭಾನುವಾರ, 28 ಏಪ್ರಿಲ್ 2019 (15:41 IST)
ಶ್ರೀಲಂಕಾದಲ್ಲಿ ಉಗ್ರರು ಸರಣಿ ಬಾಂಬ್ ಸ್ಫೋಟ ನಡೆಸಿದ್ದ ಹಿನ್ನಲೆಯಲ್ಲಿ ರಾಜ್ಯದಲ್ಲಿಯೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ವಾಣಿಜ್ಯ ನಗರಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಹುಬ್ಬಳ್ಳಿಯ ಕಾರವಾರ ರಸ್ತೆಯ ಸಿ ಆರ್ ಮೈದಾನದಲ್ಲಿ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್ ವತಿಯಿಂದ ಸಭೆ ಕರೆಯಲಾಗಿತ್ತು. ಎಚ್ಚರಿಕೆ ವಹಿಸುವಂತೆ‌ ಹಿರಿಯ ಅಧಿಕಾರಿಗಳು ಆದೇಶ ಮಾಡಿದ್ದಾರೆ.

ಮಾಲ್, ಆಸ್ಪತ್ರೆ, ಹೊಟೇಲ್, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ, ಸೇರಿದಂತೆ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಯಾವ ರೀತಿ ನಿಗಾ ವಹಿಸಬೇಕೆಂದು ಸೂಚನೆ ನೀಡಲಾಗಿದೆ.

ಇನ್ನೂ ಮಾಲ್, ಆಸ್ಪತ್ರೆ, ಹೊಟೇಲ್, ಆಧ್ಯಾತ್ಮಿಕ ಕೇಂದ್ರಗಳಿಗೆ ಯಾರೇ ವ್ಯಕ್ತಿಗಳು ಬಂದ್ರೆ ಅವದ ಸಂಪೂರ್ಣ ಮಾಹಿತಿ ಪಡೆಯಬೇಕು.

ಯಾರಾದರೂ ಸಂಶಯಾಸ್ಪದವಾಗಿ ಕಂಡು ಬಂದ್ರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಗೃಹ ಸಚಿವ, ಡಿಕೆಶಿಗೆ ಶೆಟ್ಟರ್ ವಾರ್ನಿಂಗ್?