ಶ್ರೀಲಂಕಾ ಸರಣಿ ಬಾಂಬ್ ಸ್ಪೋಟಕ್ಕೆ ಬಲಿಯಾದ ಗೋಲ್ಡನ್ ಸ್ಟಾರ್ ಗಣೇಶ್ ಆಪ್ತರು

ಬುಧವಾರ, 24 ಏಪ್ರಿಲ್ 2019 (07:16 IST)
ಬೆಂಗಳೂರು: ಕೊಲೊಂಬೋದಲ್ಲಿ ಐಸಿಸ್ ಉಗ್ರರ ಸರಣಿ ಬಾಂಬ್ ಸ್ಪೋಟಕ್ಕೆ ಮೃತರಾದವರಲ್ಲಿ ಕೆಲವು ಭಾರತೀಯರೂ ಇದ್ದರು.

 
ಈ ಪೈಕಿ ಇದೀಗ ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಆಪ್ತರಿಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಿತ್ರರ ಅಗಲುವಿಕೆಗೆ ಗಣೇಶ್ ಕಂಬನಿ ಮಿಡಿದಿದ್ದಾರೆ.

ಪುಟ್ಟರಾಜು ಮತ್ತು ಮರಿಗೌಡ ಎಂಬಿಬ್ಬರು ಸರಣಿ ಬಾಂಬ್ ಸ್ಪೋಟಕ್ಕೆ ಬಲಿಯಾದವರಲ್ಲಿ ಸೇರಿದ್ದಾರೆ. ಈ ಇಬ್ಬರು ಮಿತ್ರರನ್ನೂ ನಾನು ಮಿಸ್ ಮಾಡಿಕೊಳ್ಳುತ್ತೇನೆ. ಸಂತ್ರಸ್ತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ. ಶ್ರೀಲಂಕಾದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸುತ್ತೇನೆ ಎಂದು ಗಣೇಶ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ 92.7 ಬಿಗ್ ಎಫ್ಎಂನಿಂದ'ಯೋಚ್ನೆ ಯಾಕೆ ಚೇಂಜ್ ಓಕೆ' ಕಾರ್ಯಕ್ರಮ