ಸ್ಯಾಂಡಲ್ ವುಡ್ ನಟ ರಿಷಿಗೆ ನಿಶ್ಚಿತಾರ್ಥ ಸಂಭ್ರಮ

ಸೋಮವಾರ, 22 ಏಪ್ರಿಲ್ 2019 (07:26 IST)
ಬೆಂಗಳೂರು:  ಆಪರೇಷನ್ ಅಲಮೇಲಮ್ಮ ಸಿನಿಮಾ ಮೂಲಕ ಭರವಸೆಯ ನಟನಾಗಿ ಗುರುತಿಸಿಕೊಂಡ ರಿಷಿ ಇದೀಗ ವಿವಾಹ ಜೀವನಕ್ಕೆ ಕಾಲಿಡುತ್ತಿದ್ದಾರೆ.


ಇತ್ತೀಚೆಗೆ ರಿಲೀಸ್ ಆಗಿರುವ ಕವಲು ದಾರಿ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದ ರಿಷಿ ಇದೀಗ ತಮ್ಮ ಗೆಳತಿ ಸ್ವಾತಿ ಜತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಮ್ಮ ಕುಟುಂಬ ಸದಸ್ಯರನ್ನು ಮಾತ್ರ ಈ ಕಾರ್ಯಕ್ರಮಕ್ಕೆ ರಿಷಿ ಆಹ್ವಾನಿಸಿದ್ದರು.

ಕವಲು ದಾರಿ ಸಿನಿಮಾ ರಿಲೀಸ್ ಆದ ಮೇಲೆಯೇ ನಿಶ್ಚಿತಾರ್ಥ ಇಟ್ಟುಕೊಳ್ಳುವ ಇರಾದೆ ರಿಷಿಗೆ ಇತ್ತಂತೆ. ಅದರಂತೇ ತಮ್ಮ ಆಪ್ತರ ಸಮ್ಮುಖದಲ್ಲಿ ಮೆಚ್ಚಿದ ಹುಡುಗಿ ಜತೆ ಉಂಗುರ ಬದಲಾಯಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಶಿವಣ್ಣನಿಗೆ ಮೆಚ್ಚುಗೆಯಾದ ವೀಕೆಂಡ್ ಟ್ರೈಲರ್!