Publish Date: Tue, 16 Apr 2019 (09:55 IST)
Updated Date: Tue, 16 Apr 2019 (09:57 IST)
ಬೆಂಗಳೂರು: ಟಿವಿ, ಪತ್ರಿಕೆ ಏನೇ ತೆರೆದರೂ ಈಗ ರಾಜಕೀಯ ಬಿಟ್ಟು ಬೇರೆ ವಿಚಾರಗಳೇ ಬರ್ತಿಲ್ಲ. ಇದು ನಟ ಶಿವರಾಜ್ ಕುಮಾರ್ ರ ಸಿಟ್ಟಿಗೆ ಕಾರಣವಾಗಿದೆ.
ಕವಚ ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶಿವಣ್ಣ ಸಿನಿಮಾ ಬಗ್ಗೆ ಒಂದೊಳ್ಳೆ ಮಾತು ಅಥವಾ ತಪ್ಪಾಗಿದ್ದರೆ ಅದನ್ನು ಎತ್ತಿತೋರಿಸಿ ಪ್ರಚಾರ ಕೊಡದ ಮಾಧ್ಯಮಗಳ ಮೇಲೆ ಶಿವಣ್ಣ ಕಿಡಿ ಕಾರಿದ್ದಾರೆ.
‘ಫ್ರೀ ಇದ್ದಾಗ ಆರಾಮವಾಗಿ ಬಂದು ಬೈಟ್ಸ್ ತಗೋತೀರಾ. ಆದರೆ ಒಂದೊಳ್ಳೆ ಸಿನಿಮಾ ಬಂದಾಗ ಅದರ ಬಗ್ಗೆ ಪ್ರಚಾರ ಮಾಡುವುದು ಅಥವಾ ನಾವು ತಪ್ಪು ಮಾಡಿದ್ದರೆ ಎಲ್ಲಿ ತಪ್ಪು ಮಾಡಿದ್ದೇವೆ ಎಂದು ಹೇಳುವ ಕೆಲಸವಾಗಲಿ ಯಾಕೆ ಮಾಡ್ತಿಲ್ಲ? ರಾಜಕೀಯ ಬಿಟ್ಟು ನಮ್ಮ ಬಗ್ಗೆಯೂ ಸ್ವಲ್ಪ ಪ್ರಚಾರ ಕೊಡಿ. ಒಂದೊಳ್ಳೆ ಮಾತಾಡಿ’ ಎಂದು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ