Publish Date: Mon, 15 Apr 2019 (08:56 IST)
Updated Date: Mon, 15 Apr 2019 (08:58 IST)
ಬೆಂಗಳೂರು: ಕೆಜಿಎಫ್ ಸಿನಿಮಾ ದೇಶದಾದ್ಯಂತ ಏಕಕಾಲಕ್ಕೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ದಾಖಲೆ ಮಾಡಿತ್ತು. ಅದರ ಬಳಿಕ ಇದೀಗ ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಈ ದಾಖಲೆ ಮಾಡಲು ಸಜ್ಜಾಗಿದೆ.
ಕಿರಿಕ್ ಪಾರ್ಟಿ ಬಳಿಕ ರಕ್ಷಿತ್ ಶೆಟ್ಟಿ ತುಂಬಾ ದಿನಗಳಿಂದ ಸಿನಿಮಾಗಳಲ್ಇಲ ಕಾಣಿಸಿಕೊಂಡಿಲ್ಲ. ಅವರನ್ನು ತೆರೆ ಮೇಲೆ ನೋಡಬೇಕು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ರಕ್ಷಿತ್ ‘ಅವನೇ ಶ್ರೀಮನ್ನಾರಾಯಣ’ ಮೂಲಕ ಸಿಹಿ ಸುದ್ದಿ ಕೊಡುತ್ತಿದ್ದಾರೆ.
ರಕ್ಷಿತ್ ಸಿನಿಮಾ ಐದು ಭಾಷೆಗಳಲ್ಲಿ ಏಕಕಾಲಕ್ಕೆ ದೇಶಾದ್ಯಂತ ಬಿಡುಗಡೆಯಾಗಲಿದ್ದು, ಆ ಮೂಲಕ ಕೆಜಿಎಫ್ ದಾಖಲೆ ಸರಿಗಟ್ಟಲಿದ್ದಾರೆ. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಅವನೇ ಶ್ರೀಮನ್ನಾರಾಯಣ ಬಿಡುಗಡೆಯಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ