Publish Date: Sat, 20 Apr 2019 (12:53 IST)
Updated Date: Sat, 20 Apr 2019 (12:55 IST)
ಸುರೇಶ್ ಶೃಂಗೇರಿ ನಿರ್ದೇಶನದ ವೀಕೆಂಡ್ ಚಿತ್ರದ ಬಗ್ಗೆ ಈಗ ಪ್ರೇಕ್ಷಕರ ನಡುವಲ್ಲೊಂದು ಚರ್ಚೆ ಆರಂಭವಾಗಿದೆ. ಈ ಚಿತ್ರ ಚಿತ್ರೀಕರಣದ ಹಂತವನ್ನೆಲ್ಲ ಯಾವ ಸುದ್ದಿಯೂ ಇಲ್ಲದಂತೆ ಮುಗಿಸಿಕೊಂಡಿದೆ. ಆದರೆ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಟ್ರೈಲರ್ ಮೂಲಕವೇ ಭರ್ಜರಿಯಾಗಿ ಟಾಕ್ ಕ್ರಿಯೇಟ್ ಮಾಡಿದೆ. ಇದೀಗ ಪ್ರೇಕ್ಷಕ ವಲಯ, ನಟನಟಿಯರು ಸೇರಿದಂತೆ ಎಲ್ಲರ ಚಿತ್ರವನ್ನೂ ವೀಕೆಂಡ್ ತನ್ನತ್ತ ಸೆಳೆದುಕೊಂಡಿದೆ.
ವೀಕೆಂಡ್ ಚಿತ್ರದ ಟ್ರೈಲರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ವೀಕ್ಷಿಸಿದ್ದಾರೆ. ಹೊಸತನ, ಯೂಥ್ಫುಲ್ ಕಥಾ ಹಂದರದ ಸ್ಪಷ್ಟ ಸುಳಿವನ್ನು ರವಾನಿಸಿರೋ ಈ ಟ್ರೈಲರ್ ಅನ್ನವರು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಕನ್ನಡ ಚಿತ್ರರಂಗದ ಲ್ಲಿ ಹೊಸಾ ಬಗೆಯ ಪ್ರಯತ್ನಗಳಾಗುತ್ತಿವೆ. ವೀಕೆಂಡ್ ಕೂಡಾ ಅದೇ ಜಾಡಿನದ್ದೆಂಬ ಸೂಚನೆ ಈ ಟ್ರೈಲರ್ ಮೂಲಕವೇ ಸಿಕ್ಕಿದೆ.
ಶಿವರಾಜ್ ಕುಮಾರ್ ಅವರೇ ಈ ರೀತಿ ಮೆಚ್ಚುಗೆಯ ಮಾತಾಡಿರೋದು ವೀಕೆಂಡ್ ಚಿತ್ರತಂಡಕ್ಕೆ ಹೊಸಾ ಹುರುಪು ತುಂಬಿ ಬಿಟ್ಟಿದೆ. ಶೃಂಗೇರಿ ಸುರೇಶ್ ಅವರು ಮೂವತ್ತು ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವವರು. ಆ ಅನುಭವಗಳನ್ನೆಲ್ಲ ಧಾರೆಯೆರೆದು ಈಗಿನ ಕಾಲಮಾನಕ್ಕೆ ಅಪ್ ಡೇಟ್ ಆಗಿಯೇ ಈ ಚಿತ್ರದ ಕಥೆ ಸಿದ್ಧಪಡಿಸಿದ್ದಾರೆ. ಈ ಕಥೆ ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಮಾದರಿಯಲ್ಲಿ ಮಜವಾಗಿ ಮೂಡಿ ಬಂದಿದೆಯೆಂಬುದಕ್ಕೆ ಈ ಟ್ರೈಲರ್ ಸಾಕ್ಷಿಯಂತಿದೆ.