ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಧಾ ರಮಣ ಧಾರವಾಹಿಯ ರಾಧಾ ಮಿಸ್ ಅಲಿಯಾಸ್ ಶ್ವೇತಾ ಆರ್ ಪ್ರಸಾದ್ ಧಾರವಾಹಿಯಿಂದ ಹೊರಬಂದಿದ್ದಾರೆ.
ಇದು ರಾಧಾ ಮಿಸ್ ಅಭಿಮಾನಿಗಳಿಗೆ ಶಾಕಿಂಗ್ ಸಂಗತಿ. ಆದರೆ ರಾಧಾ ಈ ಧಾರವಾಹಿಯಿಂದ ಹೊರಬಂದಿರುವುದು ಪಕ್ಕಾ ಆಗಿದೆ. ಇನ್ನೀಗ ರಾಧಾ ರಮಣ ಧಾರವಾಹಿಗೆ ಹೊಸ ನಾಯಕಿ ಆಗಮನವಾಗಲಿದೆ. ಅವರನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಿದೆ.
ಅಷ್ಟಕ್ಕೂ ಶ್ವೇತಾ ಧಾರವಾಹಿ ಬಿಡಲು ಕಾರಣವೇನು ಗೊತ್ತಾ? ಇದಕ್ಕೂ ಮೊದಲು ಜೀ ಕನ್ನಡ ವಾಹಿನಿಯಲ್ಲಿ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಶ್ವೇತಾ ಕಲರ್ಸ್ ಕನ್ನಡ ಮುಖ್ಯಸ್ಥ ಪರಮೇಶ‍್ವರ್ ಗುಂಡ್ಕಲ್ ಒತ್ತಾಯಕ್ಕೆ ರಾಧಾ ರಮಣ ಧಾರವಾಹಿಯಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದರಂತೆ.
ಅದರಂತೆ ರಾಧಾ ಒಂದು ವರ್ಷದ ಮಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದರಂತೆ. ಆದರೆ ಜನರ ಪ್ರತಿಕ್ರಿಯೆ ನೋಡಿ ಇಷ್ಟು ಸಮಯದವರೆಗೆ ಒಪ್ಪಂದ ಮುಂದುವರಿಸಿದ್ದರು. ಆದರೆ ಇದೀಗ ತಮಗೆ ಧಾರವಾಹಿಗಳಿಂದ ಬ್ರೇಕ್ ತೆಗೆದುಕೊಳ್ಳಬೇಕು ಎನಿಸಿದೆ. ಅದಕ್ಕೇ ಧಾರವಾಹಿಯಿಂದ ಹೊರಬಂದೆ ಎಂದು ರಾಧಾ ಮಿಸ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ