Publish Date: Thu, 18 Apr 2019 (07:11 IST)
Updated Date: Thu, 18 Apr 2019 (07:13 IST)
ಬೆಂಗಳೂರು: ಇತ್ತೀಚೆಗಷ್ಟೇ ಉದ್ಯಮಿ ಅಜಯ್ ಜತೆ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರಿ ಗೀತಾಂಜಲಿ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಇದೀಗ ಮದುಮಗಳಾಗಿರುವ ಮಗಳಿಗೆ ರವಿಚಂದ್ರನ್ ಸ್ಪೆಷಲ್ ಗಿಫ್ಟ್ಒಂದನ್ನು ರೆಡಿಮಾಡಿದ್ದಾರೆ.
ಗೀತಾಂಜಲಿ ವಿವಾಹ ಮೇ 29 ರಂದು ನಡೆಯಲಿದೆ. ಮಗಳ ಜೀವನದ ಮಹತ್ವದ ದಿನವಾದ ಇಂದು ರವಿಚಂದ್ರನ್ ತಮ್ಮ ಮುದ್ದು ಮಗಳಿಗಾಗಿ ತಾವೇ ಬರೆದು, ಸಂಗೀತ ಸಂಯೋಜಿಸಿದ ಹಾಡೊಂದನ್ನುಉಡುಗೊರೆಯಾಗಿ ನೀಡುತ್ತಿದ್ದಾರೆ.
‘ಬೆಳೆದ ಮೇಲೆ ನೀನು, ನಾನು ಮಗುವಾದೆ’ ಎನ್ನುವ ಹಾಡಿನಲ್ಲಿ ತಮ್ಮ ಮಗಳ ಮೇಲಿನ ಪ್ರೀತಿಯನ್ನು ಭಾವುಕರಾಗಿ ಹಂಚಿಕೊಂಡಿದ್ದಾರೆ ಕ್ರೇಜಿಸ್ಟಾರ್. ಇದೀಗ ಮಗಳ ಮದುವೆಯ ತಯಾರಿಯಲ್ಲಿ ಬ್ಯುಸಿಯಾಗಿರುವ ರವಿಚಂದ್ರನ್ ನಡುವೆ ಶೂಟಿಂಗ್ ಕೂಡಾ ಮಾಡುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ