Select Your Language

Notifications

webdunia
webdunia
webdunia
webdunia

92.7 ಬಿಗ್ ಎಫ್ಎಂನಿಂದ'ಯೋಚ್ನೆ ಯಾಕೆ ಚೇಂಜ್ ಓಕೆ' ಕಾರ್ಯಕ್ರಮ

92.7 ಬಿಗ್ ಎಫ್ಎಂನಿಂದ'ಯೋಚ್ನೆ ಯಾಕೆ ಚೇಂಜ್ ಓಕೆ' ಕಾರ್ಯಕ್ರಮ
ಬೆಂಗಳೂರು , ಮಂಗಳವಾರ, 23 ಏಪ್ರಿಲ್ 2019 (15:00 IST)
'ಯೋಚ್ನೆ ಯಾಕೆ ಚೇಂಜ್ ಓಕೆ' ಕಾರ್ಯಕ್ರಮದ ಬೆಂಗಳೂರಿನ ಜನಪ್ರಿಯ ಆರ್.ಜೆ.ಪಟಾಕಿ ಶೃತಿ ತನ್ನ 'ಪಟಾಕಿ ಮಾರ್ನಿಂಗ್ಸ್' ನಲ್ಲಿ ಒಂದು ಗಂಟೆ ಸಮಯವನ್ನು ಇದಕ್ಕಾಗಿ ಮೀಸಲಿಡಲಿದ್ದಾರೆ
ಕಾರ್ಯಕ್ರಮದಲ್ಲಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸುವುದರೊಂದಿಗೆ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಹೊಸ ದೃಷ್ಟಿಕೋನವನ್ನು ನೀಡಲಿದೆ
 
ಜನಪ್ರಿಯ ಮತ್ತು ಪ್ರಶಸ್ತಿ ವಿಜೇತ ರೇಡಿಯೋ ಜಾಕಿ, ಶೃತಿ ಮಾನಸಿಕ ಆರೋಗ್ಯ, ದತ್ತು, ಹೊಸ ವಯಸ್ಸಿನ ಪಾಲನೆಯಂತಹ ಸಾಮಾಜಿಕ  ವಿಷಯಗಳ ಬಗ್ಗೆ ಕೇಳುಗರೊಂದಿಗೆ ಚರ್ಚಿಸುತ್ತಾರೆ 
 
ಬೆಂಗಳೂರು, 22 ಏಪ್ರಿಲ್ 2019: ಭಾರತದ ಅತಿದೊಡ್ಡ ರೇಡಿಯೋ ಜಾಲತಾಣಗಳಲ್ಲಿ ಒಂದಾದ ಬಿಗ್ ಎಫ್ಎಂ ಮುತ್ತೂಟ್  ಫಿನ್ಕಾರ್ಪ್ ಅವರು ಪ್ರಸ್ತುತಪಡಿಸಿದ 'ಯೋಚ್ನೆ ಯಾಕೆ, ಚೇಂಜ್ ಓಕೆ' ಎಂಬ ಶೀರ್ಷಿಕೆಯ ಹೊಸ ಕಾರ್ಯಕ್ರಮವನ್ನು ಘೋಷಿಸಿದೆ. ಈ ಕಾರ್ಯಕ್ರಮವು ಸಾಮಾಜಿಕ  ವಿಷಯಗಳ ಬಗ್ಗೆ ಧನಾತ್ಮಕ ಸಂಭಾಷಣೆಗಳ ಮೂಲಕ ಪ್ರಚೋದನೆ ನೀಡುವ ಉದ್ದೇಶ ಹೊಂದಿದೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ, ಪ್ರಭಾವ ಬೀರುವ ವ್ಯಕ್ತಿತ್ವಗಳ ಕುರಿತು ಆರ್ ಜೆ ಶೃತಿ ಮಾತುಕತೆ ನಡೆಸಲಿದ್ದಾರೆ. ಜನಪ್ರಿಯ ಮತ್ತು ಪ್ರಶಸ್ತಿ ವಿಜೇತ ಆರ್ ಜೆ ಶೃತಿ ಅವರ ಬೆಳಿಗ್ಗೆ ಪ್ರದರ್ಶನ 'ಪಟಾಕಿ ಮಾರ್ನಿಂಗ್ಸ್' ನಲ್ಲಿ 10ರಿಂದ 11ರವರೆಗೆ ಪ್ರತಿ ವಾರದಲ್ಲಿ ಎರಡು ವಿಷಯಗಳಂತೆ 1 ಗಂಟೆಯ ವಿಭಾಗವಾಗಿ ಪ್ರಸಾರವಾಗುತ್ತದೆ.
 
 ಶ್ರತಿ ಯೊಂದಿಗೆ 'ಯೋಚ್ನೆ ಯಾಕೆ, ಚೇಂಜ್ ಓಕೆ' ಕೆಲವು ವಿಭಿನ್ನ ಸಾಮಾಜಿಕ ವಿಷಯಗಳನ್ನು ಮುಂಚೂಣಿಗೆ ತರಲು ಪ್ರಯತ್ನಿಸುತ್ತದೆ ಹಾಗು ರಾಷ್ಟ್ರದ ಜನರಿಗೆ ಸಾಮಾಜಿಕ ಸವಾಲು ಮತ್ತು ಸಮಸ್ಯೆಗಳ ಬಗ್ಗೆ ಸಕಾರಾತ್ಮಕ ಮಾತುಕತೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸುತ್ತದೆ. ನೈಜ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಪ್ರೇರೇಪಿಸುತ್ತದೆ ಜೊತೆಗೆ ಚಿಂತನೆಗೆ ತೊಡಗುವ ಸ್ವಗತದೊಂದಿಗೆ ಪ್ರಾರಂಭಿಸಲಾಗುತ್ತದೆ. ತಜ್ಞರ, ಚಿಂತನೆ-ಮುಖಂಡರ ಮತ್ತು ಸೆಲೆಬ್ರಿಟಿಗಳ ಅಭಿಪ್ರಾಯಗಳನ್ನು ಕಾರ್ಯಕ್ರಮಕ್ಕೆ ಸೇರಿಸಿಕೊಳ್ಳುತ್ತದೆ. ಪ್ರೋಗ್ರಾಮಿಂಗ್ನಲ್ಲಿ ಹೊಸತನ ಮತ್ತು ಸೃಜನಶೀಲತೆಯನ್ನು ವೃದ್ಧಿಸುವ ಮೂಲಕ, ಪ್ರತಿ ಸಂಚಿಕೆಯು ಮಾನಸಿಕ ಆರೋಗ್ಯ, ಹೊಸ ವಯಸ್ಸಿನ ಪೋಷಕತ್ವ, ದತ್ತು, ಬಾಡಿ ಶೆಮಿಂಗ್, ಮಕ್ಕಳ ದುರ್ಬಳಕೆ ಮೊದಲಾದ ವಿಷಯಗಳ ಸುತ್ತ ಸುತ್ತುವರಿಯಲಿದೆ. ಕೊನೆಯಲ್ಲಿ, 'ಯೋಚ್ನೆ ಯಾಕೆ, ಚೇಂಜ್ ಓಕೆ' ಎಂಬುದು ಸಮಾಜದಲ್ಲಿ ಬದುಕುತ್ತಿರುವ ಅಂದರೆ ನಿಜ ಜೀವನದ ಸ್ಪೂರ್ತಿದಾಯಕ ಕತೆಗಳನ್ನು ಗುರುತಿಸಿ ಹೇಳಲಿದೆ. ತಮಾಷೆಯ ಕಾಮಿಕ್-ಲೈನರ್ ಗಳು, ಸ್ಯಾಂಡಲ್ ವುಡ್ ಸಂಪರ್ಕ ಮತ್ತು ಸಾರ್ವಜನಿಕರೊಂದಿಗೆ ವೋಕ್ಸ್ ಪಾಪ್ ಕಾರ್ಯಕ್ರಮದ ಅಂಶವನ್ನು ವೃದ್ಧಿಸಲು ಯತ್ನಿಸುತ್ತದೆ.
 
ಈ ಕುರಿತು ಪ್ರತಿಕ್ರಿಯಿಸಿದ ಆರ್.ಜೆ.ಶೃತಿ, ‘ಯೋಚ್ನೆ ಯಾಕೆ, ಚೇಂಜ್ ಒಕೆ’ ನ ಬ್ರ್ಯಾಂಡ್ ಬದಲಾವಣೆಯೊಂದಿಗೆ ಕೇಳುಗರಿಗೆ ಸಂಬಂಧಿಸಿರುವ ಯಾವುದಾದರೂ ಹೊಸ ವಿಷಯದೊಂದಿಗೆ ನಾವು ಬರುತ್ತಿದ್ದೇವೆ. ನನ್ನ ಪ್ರದರ್ಶನದ ಒಂದು ಗಂಟೆಯ ಸ್ಲಾಟ್ ನಲ್ಲಿ (ಬೆಳಿಗ್ಗೆ 10-11 ) ಪ್ಲಗಿಂಗ್ ಮಾಡುವ ಮೂಲಕ ಇದನ್ನು ಯಶಸ್ವಿಗೊಳಿಸಲಾಗಿತ್ತು ಮತ್ತು ಇದನ್ನು 'ಯೋಚ್ನೆ ಯಾಕೆ, ಚೇಂಜ್ ಒಕೆ ಅವರ್' ಎಂದು ಕರೆದರು. ನಾವು ಈ ಕಾರ್ಯಕ್ರಮದಲ್ಲಿ ಪ್ರಸ್ತುತ ವಿಷಯಗಳನ್ನು ಮಾತ್ರವಲ್ಲದೆ ಪೋಷಕರ ಪ್ರಣಯ, ಬೆದರಿಸುವಿಕೆ, ಮತದಾನದಂತಹ ಕೆಲವು ಆಸಕ್ತಿದಾಯಕ ವಿಷಯಗಳನ್ನು ಆಯ್ಕೆ ಮಾಡಿದ್ದೇವೆ. ಪ್ರೇಕ್ಷಕರಿಗೆ ಈ ಪ್ರಚಲಿತ ವಿಷಯಗಳ ಬಗ್ಗೆ ಅರಿವು ಮೂಡಿಸಿ ಅವುಗಳ ಕುರಿತಾದ ತಪ್ಪು ಅಭಿಪ್ರಾಯ ದೂರಾಗುವಂತೆ ಮಾಡುತ್ತೇವೆ. ಹಾಗು ಯಾವುದೇ ಪರಿಸ್ಥಿತಿಯನ್ನು ಸಂಪೂರ್ಣ ಹೊಸ ದೃಷ್ಟಿಕೋನದಲ್ಲಿ ನೋಡುವಂತೆ ಮಾಡುತ್ತೇವೆ. ನನ್ನ ಮೇಲೆ ನಂಬಿಕೆಯಿಟ್ಟು ಈ ಪ್ರದರ್ಶನ ನಡೆಸಲು ಅವಕಾಶ ಕೊಟ್ಟ BIG FM ಗೆ ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ಒಂದು ನಾಣ್ಯಕ್ಕೆ 3 ನೇ ಮುಖವಿದೆ ಎಂದು ಜನರಿಗೆ ತಿಳಿಸಿಕೊಡಲು ಸಿಗುವ  ಅವಕಾಶವಾಗಿದೆ. ಮತ್ತೇಕೆ ತಡ 'ಯೋಚ್ನೆ ಯಾಕೆ, ಚೇಂಜ್ ಓಕೆ'.
 
 ಬಿಗ್ ಎಫ್ಎಂ ಸಿಇಒ ಅಬ್ರಹಾಂ ಥಾಮಸ್, "ಈ ಬಹು ಬೇಡಿಕೆಯ ಅವಧಿಯಲ್ಲಿ, ಜನ ನಮ್ಮಂತಹ ಮಾಧ್ಯಮ ಬ್ರ್ಯಾಂಡ್ ಗಳಿಂದ ಹೆಚ್ಚು ಹೆಚ್ಚು ನಿರೀಕ್ಷಿಸುತ್ತಿದ್ದಾರೆ. ಬ್ರಾಂಡ್ ಗಳಿಗೆ ನಿರೀಕ್ಷಿತ ಉದ್ದೇಶವನ್ನು ತರಲು ನಿರ್ಧರಿಸಿದ್ದೇವೆ. ಈ ನಿರೀಕ್ಷೆಗೆ ಅನುಗುಣವಾಗಿ, ನಾವು "ಮನರಂಜನೆಯಿಂದ ಮನರಂಜನೆಗೆ" ಒಂದು ಉದ್ದೇಶದೊಂದಿಗೆ  ಚಲಿಸುತ್ತೇವೆ. ಜನರನ್ನು ಪ್ರಭಾವಿಸುವುದು ನಮ್ಮ ಉದ್ದೇಶವಾಗಿದೆ. 'ಯೋಚ್ನೆ ಯಾಕೆ, ಚೇಂಜ್ ಓಕೆ' ಬಿಗ್ ಎಫ್ಎಂ ಉತ್ತಮ ನಾಳೆಗಾಗಿ ಜನರನ್ನು ಪ್ರೇರೇಪಿಸುವ ಪ್ರಯತ್ನವಾಗಿದೆ" ಎಂದರು.
 
ಮಾನವ ಮಹತ್ವಾಕಾಂಕ್ಷೆಯನ್ನು ಸಮರ್ಥಿಸುವ ಮುಥೂಟ್ ಫಿನ್ ಕಾರ್ಪ್ ನ ಬ್ರಾಂಡ್ ತತ್ತ್ವವನ್ನು ಪ್ರತಿಬಿಂಬಿಸುವ ಕಾರ್ಯಕ್ರಮವು ಆಕರ್ಷಣೀಯ 92.7 ಬಿಗ್ ಎಫ್ಎಂ ಪ್ರದರ್ಶನದ ಪ್ರಾದೇಶಿಕ ಆವೃತ್ತಿಯೊಂದಿಗೆ ವಿಸ್ತರಿಸಲು ಸಹಾಯ ಮಾಡಿದೆ. ಕಾರ್ಯಕ್ರಮವು ಬಿಗ್ ಎಫ್ ಎಂ ನ ಸಂಗೀತದೊಂದಿಗೆ ಸಿಂಕ್ ಆಗಿದ್ದು, ಕೇಳುಗರಿಗೆ ಟ್ರೆಂಡಿಂಗ್ ಸಂಗೀತ ಮತ್ತು ಹಾಡುಗಳನ್ನು ಕೇಳಿಸಲಿದೆ. ಹೊಸ ಪ್ರದರ್ಶನಕ್ಕೆ 360-ಡಿಗ್ರಿ ಅಭಿಯಾನದೊಂದಿಗೆ ಭಾರೀ ಪ್ರಚಾರ ಮತ್ತು ಡಿಜಿಟಲ್ ಪ್ಲ್ಯಾಟ್ ಫಾರ್ಮ್ ಗಳಂಥ ಆಧುನಿಕ ಪ್ರಚಾರದ ತಂತ್ರಗಳನ್ನು ಬಳಸಿಕೊಳ್ಳುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀಕೆಂಡ್ ವಿತ್ ರಮೇಶ್ ಗೆ ಎರಡನೇ ಅತಿಥಿ ಯಾರು ಗೊತ್ತಾ?