ಶ್ರೀಲಂಕಾ ಸರಣಿ ಬಾಂಬ್ ಸ್ಪೋಟದಲ್ಲಿ ಕೂದಲೆಳೆಯಲ್ಲಿ ಪಾರಾದ ನಟಿ ರಾಧಿಕಾ

ಸೋಮವಾರ, 22 ಏಪ್ರಿಲ್ 2019 (08:03 IST)
ಚೆನ್ನೈ: ಶ್ರೀಲಂಕಾದಲ್ಲಿ ನಿನ್ನೆ ಸಂಭವಿಸಿದ ಸರಣಿ ಬಾಂಬ್ ಸ್ಪೋಟದಲ್ಲಿ ಭಾರತೀಯ ನಟಿ ರಾಧಿಕಾ ಶರತ್ ಕುಮಾರ್ ಕೂದಲೆಳೆಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.


ಸರಣಿ ಸ್ಪೋಟದಲ್ಲಿ ಮೂವರು ಭಾರತೀಯರು ಸೇರಿದಂತೆ 250 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಹೇಯ ಕೃತ್ಯಕ್ಕೆ ಭಾರತ ಸೇರಿದಂತೆ ವಿಶ್ವವೇ ಖಂಡನೆ ವ್ಯಕ್ತಪಡಿಸಿದೆ.

ಇನ್ನು ಸ್ಪೋಟ ನಡೆದಿದ್ದ ಹೋಟೆಲ್ ಗಳ ಪೈಕಿ ಒಂದು ಹೋಟೆಲ್ ನಲ್ಲಿ ರಾಧಿಕಾ ಶರತ್ ಕುಮಾರ್ ಕೆಲವೇ ಕ್ಷಣಗಳ ಮೊದಲು ತಂಗಿದ್ದರಂತೆ. ಆದರೆ ಸ್ಪೋಟಕ್ಕೆ ಕೆಲವೇ ಹೊತ್ತಿನ ಮೊದಲು ಅವರು ಹೋಟೆಲ್ ಕೊಠಡಿಯಿಂದ ತೆರಳಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಅವರು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದು ದೇವರೇ ನನ್ನ ಕಾಪಾಡಿದ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಚಿತ್ರರಂಗಕ್ಕೆ ಬಂದು ಇಷ್ಟು ವರ್ಷ ಆಗೋಯ್ತಲ್ಲಾ...! ಭಾವುಕರಾದ ಗಣೇಶ್