ಬೆಂಗಳೂರು: ಪುನೀತ್ ರಾಜ್ ಕುಮಾರ್ ಜತೆ ಬಿಂದಾಸ್ ಚಿತ್ರದಲ್ಲಿ ನಟಿಸಿದ್ದ ಹಂಸಿಕಾ ಮೊಟ್ವಾನಿ ಗೊತ್ತಲ್ಲ? ಆಕೆ ಈಗ ಭಂಗಿ ಸೇದಿ ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದಾಳೆ.
									
										
								
																	
ತಮಿಳಿನಲ್ಲಿ ಪಾಪ್ಯುಲರ್ ಆದ ನಟಿ ಹಂಸಿಕಾ ಇದೀಗ ತಮ್ಮ 50 ನೇ ಸಿನಿಮಾ ‘ಮಹಾ’ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಹಿಳಾ ಪ್ರಧಾನವಾದ ಈ ಚಿತ್ರದಲ್ಲಿ ಹಂಸಿಕಾ ಖಾವಿ ಬಟ್ಟೆ ಹಾಕಿಕೊಂಡು ಸಿಂಹಾಸನ ಮೇಲೆ ಕೂತುಕೊಂಡು ಭಂಗಿ ಸೇದುವ ರೀತಿಯಲ್ಲಿ ಫಸ್ಟ್ ಲುಕ್ ಆಗಿ ಬಿಡುಗಡೆ ಮಾಡಲಾಗಿದೆ.
									
			
			 
 			
 
 			
			                     
							
							
			        							
								
																	ಯಾವಾಗ ಈ ಫೋಟೋ ವೈರಲ್ ಆಯ್ತೋ, ಇದೀಗ ಹಂಸಿಕಾ ಮೇಲೆ ಮತ್ತು ಚಿತ್ರದ ನಿರ್ದೇಶಕ ಯುಆರ್ ಜಮೀಲ್ ಮೇಲೆ ಪ್ರಕರಣ ದಾಖಲಾಗಿದೆ.  ಖಾವಿ ಬಟ್ಟೆ ಹಾಕಿಕೊಂಡು ಧೂಮಪಾನ ಮಾಡಿ ಸನ್ಯಾಸಿಗಳಿಗೆ ಅವಮಾನ ಮಾಡಿದ್ದಕ್ಕೆ ಹಂಸಿಕಾ ಮತ್ತು ಆಕೆಯ ಚಿತ್ರ ನಿರ್ದೇಶಕರು ಈಗ ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದಾರೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ