ಕೆಜಿಎಫ್ ಬಿಡುಗಡೆಗೆ ಮುನ್ನ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಯಶ್ (ಫೋಟೋಗಳು)

ಸೋಮವಾರ, 17 ಡಿಸೆಂಬರ್ 2018 (09:08 IST)
ಬೆಂಗಳೂರು: ಕೆಜಿಎಫ್ ಬಿಡುಗಡೆಗೆ ಕ್ಷಣಗಣನೆಯಾಗುತ್ತಿರುವಾಗಲೇ ರಾಕಿಂಗ್ ಸ್ಟಾರ್ ಯಶ್ ತಮ್ಮ ಮಹತ್ವಾಕಾಂಕ್ಷೆಯ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲೆಂದು ದೇವರ ಮೊರೆ ಹೋಗಿದ್ದಾರೆ.


ನಿನ್ನೆ ಧರ್ಮಸ್ಥಳ, ಕಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್ ಮತ್ತು ಕೆಜಿಎಫ್ ಚಿತ್ರತಂಡ, ದೇವರ ದರ್ಶನ ಪಡೆದರು. ಧರ್ಮಸ್ಥಳದಲ್ಲಿ ಮಂಜುನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಅಷ್ಟೇ ಅಲ್ಲದೆ, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಜತೆ ಮಾತುಕತೆ ನಡೆಸಿದರು.

ಮದುವೆಯಾದ ಹೊಸತರಲ್ಲೂ ಯಶ್ ತಮ್ಮ ಪತ್ನಿ ರಾಧಿಕಾ ಜತೆ ಇಲ್ಲಿಗೆ ಬಂದು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಇದೀಗ ಸಿನಿಮಾ ಜತೆಗೆ ವೈಯಕ್ತಿಕ ಬದುಕಿನಲ್ಲೂ ಅಪ್ಪನಾದ ಖುಷಿಯಲ್ಲಿರುವ ಯಶ್ ಧರ್ಮಸ್ಥಳ ಮಂಜುನಾಥನ ಆಶೀರ್ವಾದ ಪಡೆಯಲು ಬಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಡುಗಡೆಯಾದ 24 ಗಂಟೆಯೊಳಗೆ ಕೆಜಿಎಫ್ ಹಾಡು ಮಾಡಿದ ಅಬ್ಬರ ನೋಡಿ!