ಇನ್ನು ಒಂದು ವಾರ ರಾಕಿಂಗ್ ಸ್ಟಾರ್ ಕೆಜಿಎಫ್ ಟಿಕೆಟ್ ಕೇಳುವ ಹಾಗೇ ಇಲ್ಲ!

ಶುಕ್ರವಾರ, 14 ಡಿಸೆಂಬರ್ 2018 (09:32 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಬಿಡುಗಡೆಗೆ ಇನ್ನು ಒಂದು ವಾರ ಬಾಕಿಯಿದ್ದು, ಆಗಲೇ ಆನ್ ಲೈನ್ ಬುಕಿಂಗ್ ಶುರುವಾಗಿದೆ.


ಆನ್ ಲೈನ್ ಬುಕಿಂಗ್ ಶುರುವಾದ ಕೆಲವೇ ಗಂಟೆಗಳಲ್ಲಿ ಟಿಕೆಟ್ ಗಳು ಬಿಸಿ ತುಪ್ಪ ದೋಸೆಯಂತೆ ಖಾಲಿಯಾಗುತ್ತಿವೆ. ಮೂಲಗಳ ಪ್ರಕಾರ ಡಿಸೆಂಬರ್ 21 ರಿಂದ ಸುಮಾರು ಒಂದು ವಾರದ ಕಾಲದ ಕನ್ನಡ ವರ್ಷನ್‍ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ತಮಿಳು ಭಾಷೆಯ ಸಿನಿಮಾ ಟಿಕೆಟ್ ಕೆಲವೇ ಕೆಲವು ಬಾಕಿಯಿವೆ ಎನ್ನಲಾಗಿದೆ.

ಇದು ಕೆಜಿಎಫ್ ಬಗ್ಗೆ ಸಿನಿರಸಿಕರು ಎಲ್ಲಾ ಭಾಷೆಯಲ್ಲಿ ಎಷ್ಟು ಕ್ರೇಜ್ ಬೆಳೆಸಿಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ. ಕನ್ನಡ ಮಾತ್ರವಲ್ಲದೆ, ಬೇರೆ ಭಾಷೆಯಲ್ಲೂ ಸಿನಿಮಾಗೆ ಅಷ್ಟೇ ಬೇಡಿಕೆ ಇದೆ ಎನ್ನುವುದು ವಿಶೇಷ. ಇದು ಕನ್ನಡ ಸಿನಿಮಾ ಪಾಲಿಗೆ ನಿಜಕ್ಕೂ ಹೆಮ್ಮೆಯ ಸಂಗತಿಯೇ ಸರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಂಬರೀಶ್ ಅಭಿಮಾನಿಯ ಈ ನಿರ್ಧಾರ ನೋಡಿ ಕೈ ಎತ್ತಿ ಮುಗಿದ ಸಮುಲತಾ ಅಂಬರೀಶ್!