Select Your Language

Notifications

webdunia
webdunia
webdunia
webdunia

ಅರ್ಜುನ್ ಜನ್ಯಾ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ ಕಾಕತಾಳೀಯ ಕತೆ!

ಅರ್ಜುನ್ ಜನ್ಯಾ ಬಗ್ಗೆ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದ ಕಾಕತಾಳೀಯ ಕತೆ!
ಬೆಂಗಳೂರು , ಗುರುವಾರ, 13 ಡಿಸೆಂಬರ್ 2018 (09:47 IST)
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 99 ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡುವುದರೊಂದಿಗೆ 100 ನೇ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ ಗರಿಮೆಗೆ ಪಾತ್ರರಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರ ಜತೆಗೆ ಗಣೇಶ್ ಹೊಸದೊಂದು ವಿಚಾರ ಹೇಳಿದ್ದಾರೆ.


ತಮ್ಮ ಸಿನಿಮಾ ಮೂಲಕ 100 ನೇ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುತ್ತಿರುವ ಅರ್ಜುನ್ ಜನ್ಯಾಗೆ ಅಭಿನಂದಿಸುವುದರ ಜತೆಗೆ ಸಿನಿರಂಗದ ದಿಗ್ಗಜರ ದಾಖಲೆಯ ಸಿನಿಮಾಗಳಿಗೆ ರಾಮು ಫಿಲಂಸ್ ಸಾಕ್ಷಿಯಾದ ವಿಚಾರವನ್ನು ಅಂಕಿ ಅಂಶ ಸಮೇತ ವಿವರಿಸಿದ್ದಾರೆ ಗಣೇಶ್.

ನಿರ್ಮಾಪಕ ರಾಮು ಶಿವರಾಜ್ ಕುಮಾರ್, ಹಂಸಲೇಖ, ಮತ್ತೀಗ ಅರ್ಜುನ್ ಜನ್ಯಾರ ದಾಖಲೆಯ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ. ‘ಇದು ಕಾಕತಾಳೀಯ ಆದರೂ ಸತ್ಯ. 1999 ರಲ್ಲಿ ಡಾ. ಶಿವಣ್ಣ ಅಭಿನಯದ 50 ನೇ ಚಿತ್ರ ‘ಎಕೆ47’ ನಿರ್ಮಾಣ ರಾಮು ಫಿಲಂಸ್. 2003 ರ ನಾದ ಬ್ರಹ್ಮ ಹಂಸಲೇಖ ಅವರ 200 ನೇ ಸಂಗೀತ ನಿರ್ದೇಶನದ ಸಿನಿಮಾಗೆ ರಾಮು ಫಿಲಂಸ್ ನಿರ್ಮಾಣ. ಇದೀಗ ಅರ್ಜುನ್ ಜನ್ಯಾ 100 ನೇ ಸಿನಿಮಾ 99 ಕ್ಕೂ ರಾಮು ಫಿಲಂಸ್ ನಿರ್ಮಾಣ. ಸಾಧಕರ ಸಾಧನೆಯ ಹೆಜ್ಜೆಗಳಿಗೆ ಗುರುತಾದ ಸಂಸ್ಥೆ ರಾಮು ಫಿಲಂಸ್’ ಎಂದು ಗಣೇಶ್ ಹೊಸ ಅಂಶವೊಂದನ್ನು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಅಂಬರೀಶ್ ಮಾಡಿದ ಕೆಲಸವನ್ನೇ ಮಾಡಿದ ಪುತ್ರ ಅಭಿಷೇಕ್