Publish Date: Fri, 11 May 2018 (13:50 IST)
Updated Date: Fri, 11 May 2018 (13:51 IST)
ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಇದೀಗ ತಮ್ಮ ಆಪ್ತರಾದ ಆರ್.ಅಶೋಕ್ ಅವರ ಪರವಾಗಿ ಮತಯಾಚಿಸಿದ್ದಾರೆ.
ನಟ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ಆರ್ ಆರ್ ನಗರದ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಶಿಲ್ಪಾ ಅವರಿಗೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬೇಸರಗೊಂಡು ಪಕ್ಷದ ಪರವಾಗಿ ಚುನಾವಣಾ ಪ್ರಚಾರಕ್ಕೆ ಕಾಲಿಡಲಿಲ್ಲ.
ಆದರೆ ಅವರ ಪತಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಮಾತ್ರ ಯಾವುದೇ ಬೇಸರವಿಲ್ಲದೆ ತಮ್ಮ ಆಪ್ತರಾದ ಆರ್.ಅಶೋಕ್ ಅವರ ಪರವಾಗಿ ಪ್ರಚಾರ ಮಾಡಿದ್ದಾರೆ.