Publish Date: Fri, 11 May 2018 (13:36 IST)
Updated Date: Fri, 11 May 2018 (13:38 IST)
ಪುನೀತ್ ರಾಜ್ ಕುಮಾರ್ ಅಭಿನಯದ ‘ಮಿಲನ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ ಮಲಯಾಳಂನ ನಟಿ ಪಾರ್ವತಿ ಅವರು ಪ್ರಯಾಣಿಸುತ್ತಿರುವ ಕಾರು ರಸ್ತೆ ಅಪಘಾತಕ್ಕೊಳಗಾಗಿದೆ ಎಂಬುದಾಗಿ ತಿಳಿದುಬಂದಿದೆ.
ಕೊಚ್ಚಿಯಿಂದ ತ್ರಿವೇಂಡ್ರಂಗೆ ಒಂದು ಬಾಡಿಗೆ ಇನ್ನೋವಾದಲ್ಲಿ ನಟಿ ಪಾರ್ವತಿ ಅವರು ಪ್ರಯಾಣಿಸುತ್ತಿರುವಾಗ ಇನ್ನೊಂದು ಕಾರು ಅವರ ವಾಹನಕ್ಕೆ ಡಿಕ್ಕಿ ಹೊಡೆದಿದೆ.
ಅದೃಷ್ಟವಶಾತ್ ಈ ಅಪಘಾತದಲ್ಲಿ ಎರಡೂ ವಾಹನಗಳಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ನಟಿ ಪಾರ್ವತಿ ಅವರು ಯಾವುದೇ ಗಾಯವಾಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಅಪಘಾತದ ಬಗ್ಗೆ ಎರಡೂ ಕಡೆಯವರಿಗೆ ರಾಜಿಯಾಗದ ಕಾರಣದಿಂದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.