Select Your Language

Notifications

webdunia
webdunia
webdunia
webdunia

ಶುಭಕಾರ್ಯಗಳಲ್ಲಿ ಹಣದ ರೂಪದಲ್ಲಿ ಉಡುಗೊರೆ ಕೊಡುವಾಗ ಈ ರೀತಿ ಕೊಟ್ಟರೆ ಉತ್ತಮವಂತೆ

ಶುಭಕಾರ್ಯಗಳಲ್ಲಿ ಹಣದ ರೂಪದಲ್ಲಿ ಉಡುಗೊರೆ ಕೊಡುವಾಗ ಈ ರೀತಿ ಕೊಟ್ಟರೆ ಉತ್ತಮವಂತೆ
ಬೆಂಗಳೂರು , ಶುಕ್ರವಾರ, 11 ಮೇ 2018 (13:27 IST)
ಹಿಂದೂಗಳ ಮದುವೆ, ಹುಟ್ಟುಹಬ್ಬ, ನಿಶ್ಚಿತಾರ್ಥದಂತಹವು ನಡೆದರೆ ಉಡುಗೊರೆ ನೀಡುತ್ತಾರೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಕವರ್ ಒಂದರಲ್ಲಿ ಸ್ವಲ್ಪ ಹಣವನ್ನು ಇಟ್ಟು ಮುಯ್ಯಿ ಕೊಡುತ್ತಾರೆ. ಆದರೆ ಆ ಮೊತ್ತ ಯಾವಾಗಲೂ ರೂ.51, ರೂ.101, ರೂ.201, ರೂ.501, ರೂ.1001 ಈ ರೀತಿ ಇರುತ್ತದೆ. ಇಷ್ಟಕ್ಕೂ ಈ ರೀತಿ ಹಣಕ್ಕೆ ರೂ.1 ಸೇರಿಸಿ ಯಾಕೆ ಕೊಡುತ್ತಾರೆ ಎಂಬುದನ್ನು ತಿಳಿಬೇಕಾ.
ರೂ.50, ರೂ.100, ರೂ.200, ರೂ.500, ರೂ.1000 ಈ ಮೊತ್ತದ ಅಂಕೆಗಳ ಕೊನೆಯಲ್ಲಿ ಸೊನ್ನೆಗಳಿವೆ ಅಲ್ಲವೇ. ಆ ರೀತಿ ಸೊನ್ನೆ ಬರುವಂತೆ ಹಣವನ್ನು ರೌಂಡ್ ಫಿಗರ್ನಲ್ಲಿ ಕೊಟ್ಟರೆ ಆ ಹಣವನ್ನು ತೆಗೆದುಕೊಂಡವರಿಗೆ ಸಮಸ್ಯೆಗಳು ಬರುತ್ತವಂತೆ. ಆರೋಗ್ಯದಲ್ಲಿ, ಆರ್ಥಿಕವಾಗಿ ಸಮಸ್ಯೆಗಳು ಎದುರಾಗುತ್ತವಂತೆ. ಅದೇ ವಧುವರರಿಗೆ ಆ ರೀತಿ ರೌಂಡ್ ಫಿಗರ್ನಲ್ಲಿ ಹಣ ನೀಡಿದರೆ ಅದರಿಂದ ಅವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗುತ್ತವೆ ಎಂಬ ನಂಬಿಕೆ ಇದೆ.
 
ಆದರೆ ರೌಂಡ್ ಫಿಗರ್ ಅಲ್ಲದೆ ರೂ.51, ರೂ.101 ಈ ರೀತಿಯಾಗಿ ಹಣ ಕೊಟ್ಟರೆ ಅದನ್ನು ವಿಭಜಿಸಲು ಸಾಧ್ಯವಾಗಲ್ಲ ಅಲ್ಲವೇ. ಹಾಗಾಗಿ ವಧುವರರನ್ನು ಒಂದೇ ಮನಸ್ಸಿನಿಂದ ಕಲೆತು ಬೆರೆತು ಇರುತ್ತಾರಂತೆ. ಅವರ ದಾಂಪತ್ಯ ಜೀವನ ಸಹ ಅನ್ಯೋನ್ಯವಾಗಿರುತ್ತದಂತೆ.

ರೌಂಡ್ ಫಿಗರ್ ಮೊತ್ತಕ್ಕೆ ರೂ.1 ಸೇರಿಸಿ ಕೊಡುವ ಕಾರಣ ಆ ಮೊತ್ತವನ್ನು ತೆಗೆದುಕೊಂಡವರಿಗೆ, ಕೊಟ್ಟವರಿಗೆ ಎಲ್ಲ ವಿಧದಲ್ಲೂ ಶುಭವಾಗುತ್ತದೆ. ಆರೋಗ್ಯ, ವಿದ್ಯೆಯ ಜತೆಗೆ ಅವರಿಗಿರುವ ಸಮಸ್ಯೆಗಳೂ ನಿವಾರಣೆಯಾಗುತ್ತವೆ. ಕೆಲವರಿಗಾದರೆ ಆ ರೀತಿ ಹಣ ಕೊಡುವುದರಿಂದ ದೊಡ್ಡವರ ಆಶೀರ್ವಾದ ಸಿಗುತ್ತದೆಂದು ನಂಬುತ್ತಾರೆ. ಹಾಗಾಗಿ ನಮ್ಮ ಹಿರಿಯರು ರೌಂಡ್ ಫಿಗರ್ನಲ್ಲಿ ಬರುವ ಹಣವನ್ನು ಉಡುಗೊರೆಯಾಗಿ ಕೊಡಬಾರದೆಂದು ಹೇಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ರಹಣದ ಸಮಯ ದೇವಾಲಯಗಳನ್ನು ಮುಚ್ಚುತ್ತಾರೆ. ಯಾಕೆ ಗೊತ್ತಾ?