ಬೆಂಗಳೂರು : ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸೋಮವಾರ (ಇಂದು) ತಮ್ಮ 38ನೇ ವರ್ಷದ ಹುಟ್ಟಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ.
ತಮ್ಮ ನೆಚ್ಚಿನ ನಟನಿಗೆ ಶುಭಕೋರಲು ರಾತ್ರಿಯಿಂದಲೇ ಅಭಿಮಾನಿಗಳು ದಂಡು ರಾಜರಾಜೇಶ್ವರಿ ನಗರದಲ್ಲಿರುವ ಗಣೇಶ್ ಅವರ ಮನೆಯ ಮುಂದೆ ನೆರೆದಿದ್ದು, ಇಂದು ಎಲ್ಲಾ ಅಭಿಮಾನಿಗಳು ಹಾಗೂ ಕುಟುಂಬಸ್ಥರೊಂದಿಗೆ ಕೇಕ್ ಕತ್ತರಿಸುವ ಮೂಲಕ ಗಣೇಶ್ ಅವರು ತಮ್ಮ ಹುಟ್ಟಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಗೋಲ್ಡನ್ ಸ್ಟಾರ್ ಗಣೇಶ್ ಅವರು, ‘ನನ್ನ ಹುಟ್ಟುಹಬ್ಬವನ್ನು ತಮ್ಮ ಹುಟ್ಟುಹಬ್ಬ ಎಂದುಕೊಂಡು ರಾತ್ರಿಯಿಂದಲೇ ಮನೆ ಮುಂದೆ ಜಮಾಯಿಸಿ, ಬ್ಯಾನರ್, ಕಟೌಟ್ ಹಾಕಿ ಸಂಭ್ರಮಿಸುತ್ತಿರುವ ನನ್ನ ಅಭಿಮಾನಿಗಳಿಗೆ ನಾನು ಚಿರ ಋಣಿ. ಅಭಿಮಾನಿಗಳು ಸಂತೋಷಪಡುವಂತಹ ಚಿತ್ರಗಳನ್ನೇ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಇದೇ ರೀತಿ ನನ್ನನ್ನು ಪ್ರೋತ್ಸಾಹಿಸಿ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ