ಹಳದಿ ಉಗುರು ಹೋಗಲಾಡಿಸಿ ಸುಂದರ ಉಗುರು ನಿಮ್ಮದಾಗಿಸಿಕೊಳ್ಳಲು ಇದನ್ನು ಬಳಸಿ

ಸೋಮವಾರ, 2 ಜುಲೈ 2018 (11:54 IST)
ಬೆಂಗಳೂರು :ಕೆಲವರ ಉಗುರುಗಳು ಹಳದಿ ಕಟ್ಟಿರುತ್ತದೆ. ಅನೇಕ ದಿನಗಳವರೆಗೆ ಉಗುರುಗಳಿಗೆ ನೇಲ್ ಪಾಲಿಶ್ ಹಚ್ಚಿದಲ್ಲಿ ಉಗುರುಗಳಿಗೆ ಆಮ್ಲಜನಕ ಸಿಗದೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಳದಿ ಉಗುರು ಹೋಗಲಾಡಿಸಿ ಹೊಳಪುಳ್ಳ ಸುಂದರ ಉಗುರು ನಿಮ್ಮದಾಗಿಸಿಕೊಳ್ಳಲು ಇಲ್ಲಿದೆ ಟಿಪ್ಸ್.


ಟೂತ್ ಪೇಸ್ಟ್ ನಮ್ಮ ಹಲ್ಲನ್ನು ಸ್ವಚ್ಛಗೊಳಿಸುವ ಜೊತೆಗೆ ನಮ್ಮ ಉಗುರಿನ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಅರ್ಧ ಚಮಚ ನಿಂಬೆ ರಸ, ಒಂದು ಚಮಚ ಟೂತ್ ಪೇಸ್ಟ್ ತೆಗೆದುಕೊಳ್ಳಿ. ಮೊದಲು ಉಗುರನ್ನು ಸ್ವಚ್ಛಗೊಳಿಸಿಕೊಳ್ಳಿ. ಉಗುರಿಗೆ ಹಚ್ಚಿರುವ ನೇಲ್ ಪಾಲಿಶನ್ನು ತೆಗೆಯಿರಿ. ನಂತ್ರ ಟೂತ್ ಪೇಸ್ಟ್ ಗೆ ನಿಂಬು ರಸ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಉಗುರಿಗೆ ಹಚ್ಚಿ ಚೆನ್ನಾಗಿ ಉಜ್ಜಿ. ನಂತರ ತೊಳೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಾಮಾನ್ಯವಾಗಿ ದಂಪತಿಗಳು ಎದುರಿಸುವ ಲೈಂಗಿಕ ಸಮಸ್ಯೆಗಳು ಇವು!