Publish Date: Sun, 01 Jul 2018 (12:20 IST)
Updated Date: Sun, 01 Jul 2018 (12:23 IST)
ಬೆಂಗಳೂರು : ನಟ ಜಗ್ಗೇಶ್ ಅವರು ತಮ್ಮ ಮನೆಯ ಸಮೀಪ ಮರಗಳನ್ನು ಕತ್ತರಿಸುವುದನ್ನು ತಡೆದು ಪರಿಸರ ಪ್ರೇಮ ಮೆರೆದಿದ್ದಾರೆ.
ನಟ ಜಗ್ಗೇಶ್ ಅವರು 30ವರ್ಷದಿಂದ ಮಲ್ಲೇಶ್ವರಂನಲ್ಲಿ ವಾಸವಾಗಿದ್ದು, ತಮ್ಮ ಮನೆಯ ಸುತ್ತಾ ಮುತ್ತ ಸಾಕಷ್ಟು ಮರಗಳನ್ನ ಬೆಳೆಸಿ ಪೋಷಣೆ ಮಾಡುತ್ತಾ ಬಂದಿದ್ದಾರೆ. ಆದರೆ ಅವರ ಮನೆಯ ಸುತ್ತಾ ಮುತ್ತಲಿನ ನಿವಾಸಿಗಳು ಮನೆಯ ಆವರಣಕ್ಕೆ ಸಮಸ್ಯೆ ಆಗುತ್ತದೆ ಎನ್ನುವ ಕಾರಣದಿಂದ ಮರಗಳನ್ನು ಕಡಿಯಲು ಮುಂದಾಗಿದ್ದಾರೆ.
ಇದರಿಂದ ಕೋಪಗೊಂಡ ಜಗ್ಗೇಶ್, ಅಧಿಕಾರಿಗಳು, ವಿದ್ಯಾವಂತರ ವಿರುದ್ಧ ಕಿಡಿ ಕಾರಿದ್ದಾರೆ. ಅಲ್ಲಿಂದಲೇ ಫೇಸ್ಬುಕ್ ಲೈವ್ ಬಂದ ಅವರು, ಅಲ್ಲಿ ನಡೆಯುತ್ತಿದ್ದ ದುಷ್ಕೃತ್ಯವನ್ನು ಬಟಾ ಬಯಲು ಮಾಡಿದ್ದಾರೆ. ತಮ್ಮ ತೆವಲಿಗಾಗಿ ಮರ ಕಡಿಯವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ