Publish Date: Sun, 01 Jul 2018 (12:17 IST)
Updated Date: Sun, 01 Jul 2018 (12:19 IST)
ಚೆನ್ನೈ : ಸಿನಿಮಾದಲ್ಲಿ ದೊಡ್ಡ ದೊಡ್ಡ ರೌಡಿಗಳನ್ನು ಹೊಡೆದು ಧೂಳಿಪಟ್ಟ ಮಾಡುವ ತಮಿಳು ನಿರ್ಮಾಪಕರ ಸಂಘದ ಅಧ್ಯಕ್ಷ, ನಟ ವಿಶಾಲ್ ಅವರು ನಿಜ ಜೀವನದಲ್ಲಿ ಒಂದು ಚಿಕ್ಕ ಹಾವಿಗೆ ಹೆದರುತ್ತಾರಂತೆ.
ಈ ಸಿಕ್ರೇಟ್ ನ್ನು ‘ಸ್ಯಾಂಡಕೋಜಿ 2’ ಚಿತ್ರದಲ್ಲಿ ವಿಶಾಲ್ ಅವರ ಜೊತೆ ನಟಿಸಿದ ತಮಿಳು ಚಿತ್ರರಂಗದ ನಟಿ ವರಲಕ್ಷ್ಮೀ ಶರತ್ ಕುಮಾರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ವಿಶಾಲ್ ಅವರಿಗೆ ಗೆ ಹಾವೆಂದರೆ ಭಯವಂತೆ. ಅಷ್ಟೇ ಅಲ್ಲದೆ ಹಾವುಗಳ ಚಿತ್ರಗಳು, ಟ್ಯಾಟೂಗಳು ಕೂಡ ಅವರಿಗೆ ಆಗೋದಿಲ್ಲವಂತೆ. ಆದರೆ ವರಲಕ್ಷ್ಮೀ ಅವರ ಕೈಯಲ್ಲಿ ಹಾವಿನ ಟ್ಯಾಟೂ ಇದ್ದು, ಇದನ್ನು ಕಂಡರೆ ವಿಶಾಲ್ ಭಯಪಡುತ್ತಾರೆ ಎಂದು ನಟಿ ವರಲಕ್ಷ್ಮೀ ಶರತ್ ಕುಮಾರ್ ಅವರು ನಗುತ್ತಾ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ