Select Your Language

Notifications

webdunia
webdunia
webdunia
webdunia

ತಮಿಳು ಬಿಗ್ ಬಾಸ್ ಶೋ ನ ಎರಡನೇ ಸೀಸನ್ ಗೂ ಎದುರಾಗಿದೆ ಸಂಕಷ್ಟ

ತಮಿಳು ಬಿಗ್ ಬಾಸ್ ಶೋ ನ ಎರಡನೇ ಸೀಸನ್ ಗೂ ಎದುರಾಗಿದೆ ಸಂಕಷ್ಟ
ಚೆನ್ನೈ , ಶನಿವಾರ, 30 ಜೂನ್ 2018 (13:30 IST)
ಚೆನ್ನೈ : ವಿವಾದಗಳ ನಡುವೆಯೂ ಮೊದಲನೇ ಸೀಸನ್ ನನ್ನು ಯಶಸ್ವಿಯಾಗಿ ಮುಗಿಸಿದ ತಮಿಳು ಬಿಗ್ ಬಾಸ್ ಶೋ ನ ಈಗ ಎರಡನೇ ಸೀಸನ್ ಗೂ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.


ಹೌದು. ‘ಹಿಂದೂ ಮಕ್ಕಳ್ ಕಚ್ಚಿ’ ಎನ್ನುವ ಸಂಘಟನೆ ಬಿಗ್​ಬಾಸ್ ವಿರುದ್ಧ ಸಿಡೆದೆದ್ದಿದೆ. ಅಲ್ಲದೇ ಬಿಗ್ ಬಾಸ್ ನಿರೂಪಕ  ನಟ ಕಮಲ್ ಹಾಸನ್ ವಿರುದ್ದವೂ ಕೂಡ  ಈ ಸಂಘಟನೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ.


ಬಿಗ್​ಬಾಸ್ ಸ್ಪರ್ಧಿಗಳು ಅರೆಬರೆ ಬಟ್ಟೆ ಬಟ್ಟೆ ಧರಿಸುತ್ತಾರೆ, ಅಸಂಬದ್ಧ ಸಂಭಾಷಣೆ ನಡೆಸುತ್ತಾರೆ. ಇದು ತಮಿಳು ಸಂಸ್ಕೃತಿಗೆ ಧಕ್ಕೆ ತರುತ್ತಿದೆ. ಈ ಶೋ ಮೂಲಕ ತಮಿಳು ಸಂಸ್ಕೃತಿಯನ್ನು ಹಾಳುಗೆಡವಲು ಹೊರಟಿದ್ದಾರೆ ಎಂದು ಆರೋಪಿಸಿ ಈ ಕೂಡಲೇ ಬಿಗ್​ಬಾಸ್ ಶೋ ಬ್ಯಾನ್ ಮಾಡಬೇಕೆಂದು ಹಿಂದೂ ಮಕ್ಕಳ ಕಚ್ಚಿ ಸಂಘಟನೆ ಒತ್ತಾಯಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೊಮ್ಮೆ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡ ಕಾಲಿವುಡ್ ನಟ ಜೈ. ಕಾರಣವೇನು ಗೊತ್ತಾ?