Publish Date: Sun, 16 Dec 2018 (19:39 IST)
Updated Date: Sun, 16 Dec 2018 (19:41 IST)
ಕೆ.ಜಿ.ಎಫ್. ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ನಟ ಯಶ್ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದರು.
ಕೊಲ್ಲೂರು ಮೂಕಾಂಬಿಕೆ ದರ್ಶನ ವನ್ನು ಪಡೆದ ರಾಕಿಂಗ್ ಸ್ಟಾರ್ ಯಶ್ ವಿಶೇಷ ಪೂಜೆ ಸಲ್ಲಿಸಿದರು.
ಇದೇ 21ಕ್ಕೆ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಕೆ.ಜಿ.ಎಫ್ ಚಿತ್ರ ರಿಲೀಸ್ ಗೂ ಮುನ್ನ ದೇವಿ ದರ್ಶನವನ್ನು ಯಶ್ ಪಡೆದುಕೊಂಡರು.
ಹೆಲಿಕಾಪ್ಟರ್ ಮೂಲಕ ಅರೆಶಿರೂರಿಗೆ ಬಂದು ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿದರು. ನಟ ಯಶ್ ಜೊತೆ ಹೊಂಬಾಳೆ ಫಿಲ್ಮ್ಸ್ ನ ಹಲವರು ಉಪಸ್ಥಿತಿ ಇದ್ದರು.
ಕೊಲ್ಲೂರು ದೇವಳದ ಅನ್ನದಾನಕ್ಕೆ 1 ಲಕ್ಷ ರೂ.ಗಳನ್ನು ಯಶ್ ನೀಡಿದರು. 1 ಲಕ್ಷದ 6 ಸಾವಿರ ದೇಣಿಗೆಯನ್ನು ಹೊಂಬಾಳೆ ಸಂಸ್ಥೆಯವರು ನೀಡಿದರು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಿಂದ ಯಶ್ ಗೆ ಸ್ವಾಗತ ಕೋರಲಾಯಿತು.
ಇದೇ ಮೊದಲ ಬಾರಿಗೆ ಕೊಲ್ಲೂರಿಗೆ ಭೇಟಿ ನೀಡಿದ 'ಮಾಸ್ಟರ್ ಫೀಸ್', 'ರಾಜಾ ಹುಲಿ'ಯ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.