Select Your Language

Notifications

webdunia
webdunia
webdunia
webdunia

ಟಮೋಟೋ ಬಾತ್ ಶಬ್ದ ಕೇಳಿ ಬೆಚ್ಚಿ ಬಿದ್ದವರಾರು ಗೊತ್ತಾ?

ಟಮೋಟೋ ಬಾತ್ ಶಬ್ದ ಕೇಳಿ ಬೆಚ್ಚಿ ಬಿದ್ದವರಾರು ಗೊತ್ತಾ?
ಮೈಸೂರು , ಭಾನುವಾರ, 16 ಡಿಸೆಂಬರ್ 2018 (19:33 IST)
ಕೆ ಆರ್ ಆಸ್ಪತ್ರೆ ವೈದ್ಯರು ಟಮೋಟೋ ಬಾತ್ ಶಬ್ದ ಕೇಳಿ ಬೆಚ್ಚಿ ಬಿದಿದ್ದಾರೆ.

ಆಸ್ಪತ್ರೆ ಆವರಣದಲ್ಲಿ ಟಮೋಟೋ  ಬಾತ್ ಹಂಚಲು ಬಂದಿದ್ದ ಪಾಲಿಕೆ ಸದಸ್ಯನ ಕ್ರಮಕ್ಕೆ ಹಲವರು ಅಸಮಧಾನ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯನ ಆಹಾರ ಹಂಚಿಕೆಗೆ ಆಸ್ಪತ್ರೆ ವೈದ್ಯರಿಂದ ವಿರೋಧ ವ್ಯಕ್ತವಾಯಿತು. ಆಸ್ಪತ್ರೆ ಆವರಣದಲ್ಲಿ ರೋಗಿಗಳ ಕುಟುಂಬಸ್ಥರಿಗೆ ಆಹಾರ ನಿಡುವುದಕ್ಕೆ ನಿಷೇಧವಿದೆ.

ಈಗಾಗಲೇ ವಿಷ ಆಹಾರ ಸೇವಿಸಿ ಸಾವು ನೋವಾಗಿದೆ. ಆಹಾರದ ಗುಣಮಟ್ಟದ  ಬಗ್ಗೆ ನಮಗೆ ಗೊತ್ತಿಲ್ಲ. ಹೀಗಾಗಿ ಆಸ್ಪತ್ರೆ  ಆವರಣದಲ್ಲಿ ಆಹಾರ ನೀಡುವುದು ಬೇಡಾ ಎಂದು ಕೆ.ಆರ್. ಆಸ್ಪತ್ರೆ ವೈದ್ಯ ಯೋಗೇಶ್ ಹೇಳಿಕೆ ನೀಡಿದರು.

ನಮ್ಮಲ್ಲಿ ಆಹಾರಕ್ಕೆ ಯಾವುದೇ ಕೊರತೆಯಿಲ್ಲ. ನಾವು ಊಟ ಎಲ್ಲರಿಗೂ ಕೊಡ್ತಿದ್ದೇವಿ. ಆಹಾರ ಹಂಚಲು ಬಂದಿದ್ದವರನ್ನ ಮನವೊಲಿಸಿ ವಾಪಾಸ್ ಕಳುಹಿಸಿದ್ದೇವೆ ಎಂದು ವೈದ್ಯರೊಬ್ಬರು ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಜನ್ಮದಿನಾಚರಣೆ: ಕಾರ್ಯಕರ್ತರಿಂದ ಅದ್ಧೂರಿ ಆಚರಣೆ