ಮೈಸೂರು : ಚಾಮರಾಜನಗರದ ಹನೂರು ತಾಲೂಕಿನ ಮಾರಮ್ಮ ದೇವಾಲಯದ ವಿಷ ಪ್ರಸಾದ ತಿಂದು ಅಸ್ವಸ್ಥರಾಗಿದ್ದ ಮಹಿಳೆಗೆ ಚಿಕಿತ್ಸೆ ನೀಡಲು ತಡ ಮಾಡಿದ್ದಕ್ಕೆ ಶಾಸಕ ನಾಗೇಂದ್ರ ಅವರು ಆಸ್ಪತ್ರೆಯ ವೈದ್ಯರನ್ನು ತರಾಟೆ ತೆಗೆದುಕೊಂಡಿದ್ದಾರೆ.
									
			
			 
 			
 
 			
					
			        							
								
																	
ತಮಿಳುನಾಡು ಮೂಲದ ಲಕ್ಷೀ ಎಂಬವರ ಸ್ಥಿತಿ ಗಂಭೀರವಾಗಿತ್ತು, ಇದರಿಂದ ಅವರನ್ನು ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ವೈದ್ಯರು ಅಸ್ವಸ್ಥಗೊಂಡ ಮಹಿಳೆಗೆ ಚಿಕಿತ್ಸೆ ಕೊಡುವ ಬದಲು ಅವರ ಬಳಿಯೇ ಮಾಹಿತಿ ಪಡೆಯಲು ವೈದ್ಯರು ಮುಂದಾಗಿದ್ದಾರೆ. ಇದನ್ನು ಗಮನಿಸಿದ ನಾಗೇಂದ್ರ ಅವರು ವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
									
										
								
																	
ಮೊದಲು ರೋಗಿಗೆ ಚಿಕಿತ್ಸೆ ನೀಡಿ ಆ ಬಳಿಕ ಮಾಹಿತಿ ಪಡೆಯಿರಿ. ಇಂತಹ ಸಂದರ್ಭದಲ್ಲಿ ರೋಗಿಗಳ ಆರೋಗ್ಯ ಮುಖ್ಯ ಎಂದು ಶಾಸಕ ನಾಗೇಂದ್ರ ಅವರು  ವೈದ್ಯರಿಗೆ ಗರಂ ಆಗಿ ಹೇಳಿದ್ದಾರೆ.
									
											
							                     
							
							
			        							
								
																	
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.