Select Your Language

Notifications

webdunia
webdunia
webdunia
webdunia

ಮಾರಮ್ಮ ದೇವಿಯ ವಿಷ ಪ್ರಸಾದ ಪ್ರಕರಣ; ತಮಿಳುನಾಡಿನ ಜನರೇ ವಿಷ ಹಾಕಿದ್ದಾರೆ ಎಂದ ಪ್ರಕರಣದ ಆರೋಪಿ ಚಿನ್ನಪ್ಪಿ ಪುತ್ರ

ಮಾರಮ್ಮ ದೇವಿಯ ವಿಷ ಪ್ರಸಾದ ಪ್ರಕರಣ; ತಮಿಳುನಾಡಿನ ಜನರೇ ವಿಷ ಹಾಕಿದ್ದಾರೆ ಎಂದ ಪ್ರಕರಣದ ಆರೋಪಿ ಚಿನ್ನಪ್ಪಿ ಪುತ್ರ
ಚಾಮರಾಜನಗರ , ಶನಿವಾರ, 15 ಡಿಸೆಂಬರ್ 2018 (11:21 IST)
ಚಾಮರಾಜನಗರ : ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿ ಚಿನ್ನಪ್ಪಿ ಪುತ್ರ ತಮಿಳುನಾಡಿನ ಜನರೇ ವಿಷ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.


ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಕರಣದ ಆರೋಪಿ ಚಿನ್ನಪ್ಪಿ ಪುತ್ರ ಲೋಕೆಶ್ ,’ನನ್ನ ತಂದೆ ಈ ದೇವಾಲಯದ ಟ್ರಸ್ಟ್ ಆಗಿದ್ದರು. ತಮಿಳುನಾಡಿನ ಜನರೇ ವಿಷ ಹಾಕಿದ್ದಾರೆ. ಬ್ರಹ್ಮೇಶ್ವರಿ ದೇವಾಲಯದ ಕೆಲವರು ವಿಷ ಹಾಕಿರಬಹುದು. 10 ಜನ ಸದಸ್ಯರೊಂದಿಗೆ ದೇಗುಲದ ಲೆಕ್ಕ ಪತ್ರ ನೋಡಿಕೊಳ್ಳುತ್ತಿದ್ದರು. ತಮಿಳುನಾಡಿನ  ಬ್ರಹ್ಮೇಶ್ವರಿ ದೇವಾಲಯದ ಟ್ರಸ್ಟಿ ಕಾಳಪ್ಪನವರಿಗು ನಮ್ಮ ತಂದೆಯವರಿಗೂ ಆಗುತ್ತಿರಲಿಲ್ಲ.  ಅವರು ನಮ್ಮನ್ನು ಕೊಲ್ಲಲು ವಿಷ ಹಾಕಿದ್ದಾರೆ. ಆದ್ರೆ ನಾವು ತಿಂದಿರಲಿಲ್ಲ. ಓಂ ಶಕ್ತಿಗೆ ಬಂದಿದ್ದ 200 ಮಂದಿಗೆ ಬೆಳಿಗ್ಗೆಯೂ ಪ್ರಸಾದ ವಿತರಿಸಿದ್ದೆವು. ಆದ್ರೆ 8.30ರ ವೇಳೆ ಪ್ರಸಾದ ತಿಂದು ಅವರೆಲ್ಲ ಅಸ್ವಸ್ಥರಾದರು. ನಾವು ತಿಂದು ಸಾಯಬೇಕಿದ್ದ ಆಹಾರವನ್ನು ಅವರು ತಿಂದರು ಎಂದು ಹೇಳಿದ್ದಾರೆ.


‘ಇದಕ್ಕೆಲ್ಲಾ ಬೆಟ್ಟದ ಮೇಲಿರುವ ಇಮ್ಮಡಿ ಮಹಾದೇವಸ್ವಾಮಿ ಕಾರಣ. ಅವರೂ ಸಹ ನನ್ನ ತಂದೆ ಮೇಲೆ ದ್ವೇಷ ಸಾಧಿಸುತ್ತಿದ್ದರು. ದೇವಾಲಯಕ್ಕೆ ಬಂದ ಎಲ್ಲಾ ಹಣವನ್ನು ಅವರ ಅಕೌಂಟ್ ಗೆ ಹಾಕಲಾಗುತ್ತಿತ್ತು. ಆದ್ರೆ ಗೋಪುರ ಕಟ್ಟಲು ನಮ್ಮ ತಂದೆ ಮುಂದಾಳತ್ವ ವಹಿಸದ್ದೇ ಕಾರಣ. ಇದಕ್ಕೆ ಅವರು ನನ್ನ ತಂದೆ ಹಾಗೂ ನಮ್ಮನ್ನೆಲ್ಲ ಕೊಲ್ಲಲು ವಿಷ ಹಾಕಿದ್ದಾರೆ’ ಎಂದು ಪ್ರಕರಣದ ಆರೋಪಿ ಚಿನ್ನಪ್ಪಿ ಪುತ್ರ ಲೋಕೆಶ್ ಆರೋಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಸುಳ್ವಾಡಿ ಮಾರಮ್ಮ ದೇವಿಯ ವಿಷ ಪ್ರಸಾದ ಪ್ರಕರಣ; ಘಟನೆ ಬಗ್ಗೆ ಡಿಸಿಎಂ ಪರಮೇಶ್ವರ್ ಸಂತಾಪ