Select Your Language

Notifications

webdunia
webdunia
webdunia
webdunia

ಡ್ರೆಸ್ ವಿಚಾರಕ್ಕೆ ಜಗಳವಾಡಿದ ಸಹೋದರಿಯರು. ಆಮೇಲೆ ನಡೆದದ್ದೇನು ಗೊತ್ತಾ?

ಡ್ರೆಸ್ ವಿಚಾರಕ್ಕೆ ಜಗಳವಾಡಿದ ಸಹೋದರಿಯರು. ಆಮೇಲೆ ನಡೆದದ್ದೇನು ಗೊತ್ತಾ?
ಒಡಿಶಾ , ಮಂಗಳವಾರ, 11 ಡಿಸೆಂಬರ್ 2018 (07:31 IST)
ಒಡಿಶಾ : ಕ್ಷುಲ್ಲಕ ವಿಚಾರಕ್ಕೆ ಜಗಳವಾಡಿದ ಸಹೋದರಿಯರಲ್ಲೊಬ್ಬಾಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಒಡಿಶಾದ ಕೇಂದ್ರಪರ ಜಿಲ್ಲೆಯ ಬರೋ ಗ್ರಾಮದಲ್ಲಿ ನಡೆದಿದೆ.


ಮೊನಾಲಿಸಾ ಆತ್ಮಹತ್ಯೆ ಮಾಡಿಕೊಂಡ ಸಹೋದರಿ. ಜೈಪುರದ ಕೈಪಾಡದಲ್ಲಿರೋ ಕಾಶಿನಾಥ್ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈಕೆ ತನ್ನ ಸಹೋದರಿಯ ಜೊತೆ ಭಾಬಗ್ರಹಿ ಕಲಾನಿಕೇತನದಲ್ಲಿ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿದ್ದಳು. ಇತ್ತೀಚೆಗೆ ಶಿಕ್ಷಕಿಯೊಬ್ಬರ ಬಳಿ ಕಥಕ್ ಕಲಿಯಲೆಂದು ತೆರಳಿದ್ದ ಈ ಸಹೋದರಿಯರು ನಂತರ ಮನೆಗೆ ಬಂದು ಬಟ್ಟೆಗಾಗಿ ಜಗಳವಾಡಿದ್ದಾರೆ.


ಈ ಜಗಳ ವಿಪರೀತಕ್ಕೇರಿದ್ದು ಮನನೊಂದ ಮೊನಾಲಿಸಾ ಮನೆಯ ಫ್ಯಾನ್ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೂಡಲೇ ಮೊನಲಿಸಾಳನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಕೂಡ ಅದಾಗಲೇ ಆಕೆ ಮೃತಪಟ್ಟಿದ್ದಾಳೆಂದು ವೈದ್ಯರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ