Select Your Language

Notifications

webdunia
webdunia
webdunia
webdunia

ಸಿಎಂ ಜನ್ಮದಿನಾಚರಣೆ: ಕಾರ್ಯಕರ್ತರಿಂದ ಅದ್ಧೂರಿ ಆಚರಣೆ

ಸಿಎಂ ಜನ್ಮದಿನಾಚರಣೆ: ಕಾರ್ಯಕರ್ತರಿಂದ ಅದ್ಧೂರಿ ಆಚರಣೆ
ಹುಬ್ಬಳ್ಳಿ , ಭಾನುವಾರ, 16 ಡಿಸೆಂಬರ್ 2018 (19:11 IST)
ಜನಪ್ರತಿನಿಧಿಯಾದವರು ಕೇವಲ ಮಾತನಾಡಿ ಬಿಡುವುದು ಅಲ್ಲಾ. ನುಡಿದಂತೆ ನಡೆದು ತೋರಿಸುವುದು ನಿಜವಾದ  ಜನ ನಾಯಕನಾಗಿದ್ದು, ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ.‌ ಕುಮಾರಸ್ವಾಮಿ ಅವರು ನುಡಿದಂತೆ ನಡೆದ ನಾಯಕರಾಗಿದ್ದಾರೆ ಎಂದು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಗಜಾನನ ಅಣ್ವೇಕರ್  ಹೇಳಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ 59 ನೇ ಹುಟ್ಟು ಹಬ್ಬದ ಪ್ರಯುಕ್ತ ಹುಬ್ಬಳ್ಳಿಯ ಬುಡರಸಿಂಗಿ ಸಮೀಪದ ತಮ್ಮ ಜಮೀನಿನಲ್ಲಿ ಮೆಕ್ಕೆಜೋಳದ ಜಮೀನಿನಲ್ಲಿ ಕಳೆ ತೆಗೆದುಹಾಕುವುದರ ಮೂಲಕ ವಿನೂತನವಾಗಿ ಹುಟ್ಟು ಹಬ್ಬ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಬರಗಾಲದಂತಹ ಸಂದರ್ಭದಲ್ಲಿ ಇಡೀ ರಾಜ್ಯದ ರೈತರ ಸಾಲ ಮನ್ನಾ ಮಾಡುವುದು ಕಷ್ಟಕರ ಅನೇಕ ಸವಾಲುಗಳ ನಡುವೆ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡಿದಲ್ಲದೇ ಸ್ವಂತ ಭತ್ತದ ಗದ್ದೆಯಲ್ಲಿ ಸಸಿ ನೆಟ್ಟು ಅದರ ಫಸಲನ್ನು ಸಹ ನಾಡಿಗೆ ಅರ್ಪಣೆ  ಮಾಡಿದ ಧೀಮಂತ ನಾಯಕರಾಗಿದ್ದಾರೆ. ಇಂತಹದರಲ್ಲಿ ರೈತರು ಆತ್ಮಹತ್ಯೆಯಂತಹ ಹಾದಿ ಹಿಡಿದು ಕುಟುಂಬವನ್ನು ಸಂಕಷ್ಟಕ್ಕೆ ಈಡು ಮಾಡಬೇಡಿ ಎಂದರು. ಸಿಎಂ ಜನ್ಮದಿನಾಚರಣೆಯನ್ನು ವಿನೂತನವಾಗಿ ಆಚರಣೆ ಮಾಡಲಾಯಿತು.




Share this Story:

Follow Webdunia kannada

ಮುಂದಿನ ಸುದ್ದಿ

ವಿಷಾಹಾರ ಪ್ರಕರಣ: ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಭೇಟಿ