Publish Date: Sat, 20 Oct 2018 (10:45 IST)
Updated Date: Sat, 20 Oct 2018 (10:48 IST)
ಬೆಂಗಳೂರು: ಬಹುಭಾಷಾ ತಾರೆ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಅಭಿಯಾನದಲ್ಲಿ ಖ್ಯಾತ ನಟಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.
ಈ ಆರೋಪ ಮಾಡಿರುವವರು ನಟಿ ಕನ್ನಡದ ಖ್ಯಾತ ನಟಿ ಶೃತಿ ಹರಿಹರನ್. ಅರ್ಜುನ್ ಸರ್ಜಾ ವಿಸ್ಮಯ ಚಿತ್ರದ ಚಿತ್ರೀಕರಣ ವೇಳೆ ಹದ್ದು ಮೀರಿ ವರ್ತಿಸಿದ್ದರು ಎಂದು ಶೃತಿ ಹರಿಹರನ್ ಖಾಸಗಿ ವಾರಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಈ ಹಿಂದೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಶೃತಿ ಹರಿಹರನ್ ತಮ್ಮ ಮೇಲೆ ಖ್ಯಾತ ನಿರ್ಮಾಪಕರೊಬ್ಬರಿಂದಾದ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಹೇಳಿ ಸುದ್ದಿ ಮಾಡಿದ್ದರು. ಇದೀಗ ಅರ್ಜುನ್ ಸರ್ಜಾ ಮೇಲೆ ಇಂತಹ ಆರೋಪ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.