Select Your Language

Notifications

webdunia
webdunia
webdunia
webdunia

ಕಾಸ್ಟಿಂಗ್ ಕೌಚ್ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು ಗೊತ್ತಾ…?

ಕಾಸ್ಟಿಂಗ್ ಕೌಚ್ ಬಗ್ಗೆ ಅರ್ಜುನ್ ಸರ್ಜಾ ಹೇಳಿದ್ದೇನು ಗೊತ್ತಾ…?
ಬೆಂಗಳೂರು , ಮಂಗಳವಾರ, 7 ಆಗಸ್ಟ್ 2018 (08:28 IST)
ಬೆಂಗಳೂರು: ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಚರ್ಚೆಗೆ ಒಳಪಟ್ಟ ಸುದ್ದಿಯೆಂದರೆ ಅದು ಕಾಷ್ಟಿಂಗ್ ಕೌಚ್. ತೆಲುಗಿನ ಶ್ರೀರೆಡ್ಡಿ ಈ ಕುರಿತು ಒಂದು ಸಂಚಲನವನ್ನೆ ಹುಟ್ಟುಹಾಕಿದ್ದಾರೆ.


ಆದರೆ ಈಗ ನಟ ಅರ್ಜುನ್ ಸರ್ಜಾ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ನಾನು ಏಕೆ ಭಯ ಪಡಲಿ 'ಸುಮಾರು 39 ವರ್ಷದಿಂದ ನಾನು ಚಿತ್ರರಂಗದಲ್ಲಿ ಇದ್ದೇನೆ. ಈ ಬಗ್ಗೆ ನಾನೇಕೆ ಭಯ ಪಡಲಿ. ಒಂದು ವೇಳೆ ನಾನೇ ಭಯ ಪಟ್ಟರೆ ಬೇರೆಯವರು ಅವರ ಹೆಣ್ಣು ಮಕ್ಕಳನ್ನ ಹೇಗೆ ಸಿನಿಮಾ ಇಂಡಸ್ಟ್ರಿಗೆ ಕಳುಹಿಸ್ತಾರೆ.? ಬಹಳಷ್ಟು ಜನಕ್ಕೆ ಸಿನಿಮಾ ಇಂಡಸ್ಟ್ರಿ ಅಂದ್ರೆ ಒಂದು ಭಾವನೆ ಇದೆ. ಏನೋ ಆಗುತ್ತೆ ಎಂಬ ಆತಂಕ ಇದೆ. ಆದ್ರೆ, ಕೆಟ್ಟದ್ದು ಒಳ್ಳೆಯದ್ದು ಪ್ರತಿಯೊಂದು ಜಾಗದಲ್ಲೂ ಇದೆ. ಸಿನಿಮಾ ಜಗತ್ತಿನಲ್ಲಿ ಮಾತ್ರವಲ್ಲ, ಎಲ್ಲ ಕಡೆಯೂ ಒಳ್ಳೆಯವರು ಮತ್ತು ಕೆಟ್ಟವರು ಇಬ್ಬರು ಇದ್ದೇ ಇರ್ತಾರೆ'.


ಇದು ನನ್ನ ಇಂಡಸ್ಟ್ರಿ, ಅವರು ನನಗೆ ಊಟ ಹಾಕ್ತಿದ್ದಾರೆ, ನನ್ನನ್ನು ಪೋಷಿಸುತ್ತಿದ್ದಾರೆ ಮತ್ತು ಪ್ರೀತಿಸುತ್ತಿದ್ದಾರೆ. ನಾನು ತುಂಬಾ ವರ್ಷದಿಂದ ಉದ್ಯಮ ನೋಡುತ್ತಿದ್ದೇನೆ. ನನಗೆ ಯಾವುದೇ ಭಯ, ಆತಂಕ ಇಲ್ಲ' ಎಂದು ನಟ ಅರ್ಜುನ್ ಸರ್ಜಾ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಸೋನಾಲಿ ಬೇಂದ್ರೆ ಗೆಳತಿಯರ ಜತೆ ಖುಷಿಯ ಕ್ಷಣಗಳನ್ನು ಕಳೆದು ಹೇಳಿದ್ದೇನು?