Select Your Language

Notifications

webdunia
webdunia
webdunia
webdunia

Me Too ಬಗ್ಗೆ ನಟಿ ಶೃತಿ ಹರಿಹರನ್ ಹೇಳಿದ್ದೇನು ಗೊತ್ತಾ?

Me Too ಬಗ್ಗೆ ನಟಿ ಶೃತಿ ಹರಿಹರನ್ ಹೇಳಿದ್ದೇನು ಗೊತ್ತಾ?
ಹುಬ್ಬಳ್ಳಿ , ಶುಕ್ರವಾರ, 12 ಅಕ್ಟೋಬರ್ 2018 (17:23 IST)
Me Too ಅಭಿಯಾನದ ಬಗ್ಗೆ ಕೇಳಿ ಖುಷಿ ಆಗುತ್ತಿದೆ. ಹೀಗಂತ ಚಿತ್ರನಟಿ ಶೃತಿ ಹರಿಹರನ್ ಹೇಳಿದ್ದಾರೆ.

ಚಿತ್ರ ನಟಿ ಶೃತಿ ಹರಿಹರನ್ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದು, ಈಗಲಾದರೂ ಮಹಿಳೆಯರು ಧ್ವನಿ ಎತ್ತುತ್ತಿರುವುದು ಸ್ವಾಗತಾರ್ಹ. ಈ ಅಭಿಯಾನ ಮುಂದುವರೆಯುತ್ತಿದೆ. ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಬಹಿರಂಗಗೊಳ್ಳುತ್ತಿದೆ.
ಈ ಅಭಿಯಾನ ‌ಗೇಮ್ ಚೆಂಜರ್ ಆಗಲಿದೆ ಎಂದರು.

ಯಾವಾಗ ಹೇಳಿದರು ಸತ್ಯ ಸತ್ಯವೇ ಎಂದಿರುವ ಅವರು, ಒಬ್ಬ‌ ಮಹಿಳೆಗೆ ಲೈಂಗಿಕ ದೌರ್ಜನ್ಯ ಸಹಿಸಿಕೊಳ್ಳುವದು‌ ಕಷ್ಟಕರ. ಇದು ಮೀಡಿಯಾ ಸೆನ್ಸೆಸನಲ್ ಆಗುತ್ತಿದೆ. ಎಲ್ಲರ ಮೇಲೂ ಕ್ರಮ ಕೈಗೊಳ್ಳಲು ಆಗದಿದ್ರು ಕೆಲವರಿಗೆ ಶಿಕ್ಷೆಯಾಗಲಿ ಎಂದರು.

ಮುಂದಿನ ದಿನಗಳಲ್ಲಿ ದೌರ್ಜನ್ಯ ಮಾಡುವರು ವಿಚಾರ ಮಾಡುವಂತಾಗಬೇಕು. ಇದು ಗಂಡು ಮತ್ತು ಹೆಣ್ಣಿನ ಪ್ರಶ್ನೆಯಲ್ಲ. ಅಧಿಕಾರ ಬಲ ಹಾಗೂ ಹಣಬಲದಿಂದ ಇಂತ ಕೃತ್ಯ ನಡೆಯುತ್ತಿವೆ ಎಂದರು.
ಇದು ಚಿತ್ರ ರಂಗದಲ್ಲಿ ಮಾತ್ರ ಇಲ್ಲ. ಎಲ್ಲ ಫೀಲ್ಡ್ ಗಳಲ್ಲೂ ಕಾಸ್ಟಿಂಗ್ ಕೌಚ್ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿ ಈ ನಿಟ್ಟಿನಲ್ಲಿ ಫೈರ್ ಅಂತ ಸಮಿತಿ ಮಾಡುತ್ತಿದೆ. ಈ ಸಮಿತಿಯಲ್ಲಿ ಕವಿತಾ ಲಂಕೇಶ, ನಾನು ಹಾಗೂ ಪ್ರಿಯಾಂಕಾ ಉಪೇಂದ್ರ ಇದ್ದೇವೆ ಎಂದರು.

ತಾರ್ಕಿಕ ಅಂತ್ಯ ದೊರೆಯುವ ವರೆಗೂ ಮಿ ಟೂ ಅಭಿಯಾನ ಮುಂದುವರೆಯಲಿದೆ ಎಂದು ನಟಿ ಶೃತಿ ಹರಿಹರನ್ ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ನಡೆಯಿಂದ ಕಾಂಗ್ರೆಸ್ ಗೆ ಹೆಚ್ಚಿದ ಚಿಂತೆ!