Publish Date: Fri, 12 Oct 2018 (08:14 IST)
Updated Date: Fri, 12 Oct 2018 (08:15 IST)
ಬೆಂಗಳೂರು: ಮಂಡ್ಯ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು ಇದೀಗ ತಮ್ಮ ಪಕ್ಷದ ಹೈಕಮಾಂಡ್ ನಾಯಕರ ವಿರುದ್ಧವೇ ಟ್ವಿಟರ್ ಅಭಿಯಾನ ಶುರುಮಾಡಿದ್ದಾರೆ!
ಇದಕ್ಕೆ ಕಾರಣ ಮಂಡ್ಯ ಲೋಕಸಭೆ ಕ್ಷೇತ್ರದ ಉಪಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಭುಗಿಲೆದ್ದ ಅಸಮಾಧಾನ. ಡಾ.ಸಿದ್ದರಾಮಯ್ಯ ಎನ್ನುವವರಿಗೆ ಟಿಕೆಟ್ ನೀಡಿದ್ದು ಇಲ್ಲಿನ ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರತೀ ಬಾರಿಯೂ ಹೊಸ ಮುಖಗಳಿಗೆ ಮಣೆ ಹಾಕುವುದೇಕೆ? ಸ್ಥಳೀಯವಾಗಿ ಉತ್ತಮ ಕೆಲಸ ಮಾಡಿದ ನಾಯಕರು ಯಾರೂ ಕಾಣಿಸಲ್ವಾ? ಎನ್ನುವುದು ಇಲ್ಲಿನ ಬಿಜೆಪಿ ನಾಯಕರ ಪ್ರಶ್ನೆ. ಇದೇ ಕಾರಣಕ್ಕೆ ಇದೀಗ ಹೈಕಮಾಂಡ್ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.