ಚಿತ್ರರಂಗಕ್ಕೆ ಬಂದು ಇಷ್ಟು ವರ್ಷ ಆಗೋಯ್ತಲ್ಲಾ...! ಭಾವುಕರಾದ ಗಣೇಶ್

ಸೋಮವಾರ, 22 ಏಪ್ರಿಲ್ 2019 (07:47 IST)
ಬೆಂಗಳೂರು: ಕಾಮಿಡಿ ಟೈಮ್ ಎಂಬ ಉದಯ ಟಿವಿ ಪ್ರೋಗ್ರಾಂ ಮೂಲಕ ನಾಡಿಗೆ ಪರಿಚಯವಾಗಿ ಕೊನೆಗೆ ‘ಚೆಲ್ಲಾಟ’ ಸಿನಿಮಾದಿಂದ ಸಿನಿ ಜರ್ನಿ ಆರಂಭಿಸಿದ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರರಂಗದಲ್ಲಿ 19 ವರ್ಷಗಳನ್ನು ಪೂರೈಸಿದ್ದಾರೆ.

 
ತಮ್ಮ 19 ವರ್ಷಗಳ ಸಿನಿ ಜರ್ನಿಯನ್ನು ನೆನೆದು ಗೋಲ್ಡನ್ ಸ್ಟಾರ್ ಭಾವುಕರಾಗಿದ್ದಾರೆ. ಈ ವರ್ಷಗಳ ಅವಧಿಯಲ್ಲಿ ಅದೆಷ್ಟೋ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಮುಂಗಾರು ಮಳೆಯಂತೆ ದಾಖಲೆಯ ಸಿನಿಮಾ ಮಾಡಿದ್ದಾರೆ. ಹೀಗಾಗಿ ತಮ್ಮ ಸಿನಿ ಜರ್ನಿಯ ಬಗ್ಗೆ, ತಮಗೆ ಪ್ರೋತ್ಸಾಹ ಕೊಟ್ಟವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

‘ನಮಸ್ಕಾರ ನಮಸ್ಕಾರ ನಮಸ್ಕಾರ ಎಂದು ಚಿತ್ರರಂಗಕ್ಕೆ ಬಂದು 19 ವರ್ಷಗಳು ಹಾಗೂ ನಾಯಕ ನಟನಾಗಿ 13 ವರ್ಷಗಳ ಸಿನಿ ಜರ್ನಿಯಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನನ್ನ ಏಳಿಗೆಗೆ ಸಹಕರಿಸಿದ, ಹಾರೈಸಿದ ಪ್ರತಿಯೊಬ್ಬರಿಗೂ, ಮಾಧ್ಯಮ ಮಿತ್ರರಿಗೂ ಹಾಗೂ ನನ್ನ ಪ್ರೀತಿಯ ಅಭಿಮಾನಿಗಳಿಗೂ ಧನ್ಯವಾದ. ನಿಮ್ಮ ಹಾರೈಕೆ, ಪ್ರೀತಿ ಸದಾ ಹೀಗೇ ಇರಲಿ’ ಎಂದು ಗಣೇಶ್ ಧನ್ಯವಾದ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸ್ಯಾಂಡಲ್ ವುಡ್ ನಟ ರಿಷಿಗೆ ನಿಶ್ಚಿತಾರ್ಥ ಸಂಭ್ರಮ