Publish Date: Sat, 12 May 2018 (14:30 IST)
Updated Date: Sat, 12 May 2018 (14:33 IST)
ಶಿವಾಜಿನಗರ : ಇಂದು ರಾಜ್ಯಾವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಮತದಾನಕ್ಕಾಗಿ 92 ವರ್ಷದ ಅಜ್ಜ ಪ್ರತಿಭಟನೆ ಮಾಡಿರುವುದಾಗಿ ತಿಳಿದುಬಂದಿದೆ.
ಬೆಂಗಳೂರಿನ ಶಿವಾಜಿನಗರದಲ್ಲಿ ವ್ಹೀಲ್ ಚೇರ್ ನಲ್ಲಿ ಬಂದಿದ್ದ ಸುರೇಂದ್ರ ಭಟ್ನಾಗರ್ ಎಂಬ 92 ವರ್ಷದ ವಯಸ್ಕರೊಬ್ಬರು ಸುಡು ಬಿಸಿಲಿನಲ್ಲಿ ಕೂತು ಚುನಾವಣಾ ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಚುನಾವಣಾ ಸಿಬ್ಬಂದಿಗಳು ಏಕಾಏಕಿ ಹೇಳಿರುವ ಹಿನ್ನಲೆಯಲ್ಲಿ ಅಜ್ಜ ಈ ರೀತಿಯಾಗಿ ಮಾಡಿದ್ದಾರೆ. ನಂತರ ಮತದಾರರ ಪಟ್ಟಿ ಪರಿಶೀಲಿಸಿದ ಬಳಿಕ ಅವರಿಗೆ ಮತದಾನ ಮಾಡಲು ಅವಕಾಶ ನೀಡಿರುವುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ