Publish Date: Sat, 12 May 2018 (08:05 IST)
Updated Date: Sat, 12 May 2018 (08:06 IST)
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಬೆಳಗ್ಗೆಯಿಂದಲೇ ಆರಂಭವಾಗಿದ್ದು, ಕೆಲವೆಡೆ ಮತಯಂತ್ರಗಳಲ್ಲಿ ದೋಷ ಕಂಡುಬಂದದ ಪ್ರಕರಣವೂ ನಡೆದಿದೆ.
ಶಿವಾಜಿನಗರದ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಮತದಾನ ಇನ್ನೂ ಆರಂಭವಾಗಲಿಲ್ಲ. 45 ನಿಮಿಷ ವಿಳಂಬವಾದರೂ ಮತದಾನ ಪ್ರಕ್ರಿಯೆ ಪ್ರಾರಂಭವಾಗದೇ ಇದ್ದಾಗ ಮತದಾರರು ವಾಪಸ್ ತೆರಳಲು ಮುಂದಾದರು. ಈ ವೇಳೆ ಚುನಾವಣಾ ಅಧಿಕಾರಿಗಳು ಕೆಲ ಕಾಲ ಕಾಯುವಂತೆ ಮತದಾರರಿಗೆ ಮನವಿ ಮಾಡಿದರು.
ಇನ್ನು ಹೆಬ್ಬಾಳದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಮತದಾರರಿಗೆ ಆವಾಜ್ ಹಾಕಿದ ಪ್ರಕರಣ ನಡೆದಿದೆ. ತಮ್ಮ ನಾಯಕ ಬರುವವರೆಗೂ ಮತದಾನ ಮಾಡದಂತೆ ಸರತಿ ನಿಂತಿದ್ದ ಜನರಿಗೆ ಬೆಂಬಲಿಗರು ಆವಾಜ್ ಹಾಕಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.