Publish Date: Sat, 12 May 2018 (07:40 IST)
Updated Date: Sat, 12 May 2018 (07:42 IST)
ಬೆಂಗಳೂರು: ನಕಲಿ ವೋಟರ್ ಐಡಿ ಪ್ರಕರಣ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಇಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮತದಾನ ರದ್ದುಗೊಳಿಸಲಾಗಿದೆ.
ಆದರೆ ಈ ವಿಚಾರ ತಿಳಿಯದೇ ಮತಗಟ್ಟೆಗಳಿಗೆ ಬಂದ ಮತದಾರರು ಗದ್ದಲವೆಬ್ಬಿಸಿದ್ದಾರೆ. ಗುರುತಿನ ಚೀಟಿ ಹಿಡಿದು ಮತಗಟ್ಟೆಗೆ ಬಂದ ಜನರು ಇಂದು ಚುನಾವಣೆ ಎಂದು ಕೆಲಸಕ್ಕೆ ರಜೆ ಹಾಕಿ ಬಂದಿದ್ದೇವೆ. ನೀವು ಇದ್ದಕ್ಕಿದ್ದಂತೆ ಚುನಾವಣೆ ಮುಂದೂಡಲಾಗಿದೆ ಎಂದರೆ ಹೇಗೆ ಎಂದು ಮತದಾರರು ಗಲಾಟೆ ಮಾಡಿದ್ದಾರೆ.
ನಿನ್ನೆ ರಾತ್ರಿಯಷ್ಟೇ ಚುನಾವಣಾ ಆಯೋಗ ಈ ಕ್ಷೇತ್ರದ ಚುನಾವಣಾ ದಿನಾಂಕವನ್ನು ಮೇ 28 ಕ್ಕೆ ಮುಂದೂಡಿ ಆದೇಶ ಹೊರಡಿಸಿತ್ತು. ಆದರೆ ಹಲವರಿಗೆ ಇದರ ಮಾಹಿತಿಯೇ ಇಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.