Select Your Language

Notifications

webdunia
webdunia
webdunia
webdunia

ಕ್ಯೂ ತಪ್ಪಿಸಿದ ಶಾಸಕ ಕೃಷ್ಣಪ್ಪಗೆ ಜನರ ತರಾಟೆ

ಕ್ಯೂ ತಪ್ಪಿಸಿದ ಶಾಸಕ ಕೃಷ್ಣಪ್ಪಗೆ ಜನರ ತರಾಟೆ
ಬೆಂಗಳೂರು , ಶನಿವಾರ, 12 ಮೇ 2018 (07:58 IST)
ಬೆಂಗಳೂರು: ಮತದಾನ ಮಾಡಲು ಜನ ನಾಯಕನಾದರೇನು , ಜನ ಸಾಮಾನ್ಯರಾದರೇನು? ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಸಮಾನರೇ. ಆದರೆ ನಾಯಕನ ಪವರ್ ತೋರಿಸಲು ಹೋದ ಶಾಸಕ ಕೃಷ್ಣಪ್ಪಗೆ ಜನರೇ ಮಂಗಳಾರತಿ ಮಾಡಿದ್ದಾರೆ.

ವಿಜಯನಗರದ ಮತಗಟ್ಟೆ ಸಂಖ್ಯೆ 175 ರಲ್ಲಿ ಮತ ಚಲಾಯಿಸಲು ಬಂದ ಕೃಷ್ಣಪ್ಪ ಸರತಿ ಸಾಲು ತಪ್ಪಿಸಿ ಮೊದಲೇ ಮತ ಚಲಾಯಿಸಲು ಹೊರಟಾಗ ಸರತಿಯಲ್ಲಿ ನಿಂತಿದ್ದ ಜನ ತರಾಟೆಗೆ ತೆಗೆದುಕೊಂಡರು. ಬಳಿಕ ಶಾಸಕರು ನಿರ್ವಾಹವಿಲ್ಲದೇ ಇತರರಂತೇ ಸರತಿ ನಿಲ್ಲಬೇಕಾಯಿತು.

ಇನ್ನು ರಾಮನಗರ ಕ್ಷೇತ್ರದ ಮತಗಟ್ಟೆ 74 ರಲ್ಲಿ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದು, ಮತದಾನ ಪ್ರಕ್ರಿಯೆ ವಿಳಂಬವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಳ್ಳಂ ಬೆಳಗ್ಗೆಯೇ ಮತದಾನ ಮಾಡಿದ ಪ್ರಮುಖರು