Publish Date: Mon, 22 Apr 2019 (16:46 IST)
Updated Date: Mon, 22 Apr 2019 (16:50 IST)
ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದಲ್ಲಿ ರಾಜ್ಯದ ಐವರು ಜೆಡಿಎಸ್ ಮುಖಂಡರು ಹತರಾಗಿದ್ದಾರೆ.
ಭಯೋತ್ಪಾದಕರ ಅಟ್ಟಹಾಸಕ್ಕೆ ನಲುಗಿ ಜೀವಬಿಟ್ಟಿರುವ ಮುಖಂಡನ ಮನೆಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕೊಲೊಂಬೊದಲ್ಲಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಮೃತ ರಮೇಶ್ ಮನೆಗೆ ಡಿವೈಎಸ್ಪಿ ಭೇಟಿ ನೀಡಿದ್ದಾರೆ.
ತುಮಕೂರಿನ ಸರಸ್ವತಿ ಪುರಂನಲ್ಲಿರುವ ರಮೇಶ್ ನಿವಾಸಕ್ಕೆ ತುಮಕೂರು ನಗರ ಡಿವೈಎಸ್ಪಿ ತಿಪ್ಪೆಸ್ವಾಮಿ ಭೇಟಿ ನೀಡಿದ್ರು. ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿರುವ ಡಿವೈಎಸ್ಪಿ, ಮೃತದೇಹ ವಾಪಸ್ ತರಲು ಮಾಹಿತಿ ಪಡೆದುಕೊಂಡು ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.