Publish Date: Mon, 22 Apr 2019 (07:16 IST)
Updated Date: Mon, 22 Apr 2019 (07:18 IST)
ಬೆಂಗಳೂರು: ಸತತ ರಾಜಕೀಯದಿಂದ ಸುಸ್ತಾಗಿರುವ ಸಿಎಂ ಕುಮಾರಸ್ವಾಮಿ ಇದೀಗ ವಿಶ್ರಾಂತಿಯ ಮೊರೆ ಹೋಗಲಿದ್ದಾರೆ.
ಎರಡು ದಿನಗಳ ಕಾಲ ರಾಜಕೀಯದಿಂದ ದೂರವಿರಲಿರುವ ಸಿಎಂ ಕುಮಾರಸ್ವಾಮಿ ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲಿದ್ದಾರೆ. ಸತತವಾಗಿ ರಾಜಕೀಯ, ಚುನಾವಣಾ ರ್ಯಾಲಿಗಳಿಂದ ಸಿಎಂ ಎಚ್ ಡಿಕೆ ಸುಸ್ತಾಗಿದ್ದಕ್ಕೆ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದಾರೆ.
ಈ ಹಿಂದೆಯೂ ಹಲವು ಬಾರಿ ಸಿಎಂ ಕುಮಾರಸ್ವಾಮಿ ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಖಾಸಗಿ ರೆಸಾರ್ಟ್ ನಲ್ಲಿ ವಿಶ್ರಾಂತಿ ಪಡೆದಿದ್ದುಂಟು. ಈಗ ಹೇಗಿದ್ದರೂ ಕರ್ನಾಟಕದಲ್ಲಿ ಚುನಾವಣೆ ಪರ್ವ ಮುಗಿದಿದೆ. ಹೀಗಾಗಿ ಸದ್ಯಕ್ಕೆ ರೆಸ್ಟ್ ಮಾಡಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ