Publish Date: Sat, 20 Apr 2019 (14:13 IST)
Updated Date: Sat, 20 Apr 2019 (14:17 IST)
ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬಿರು ಬಿಸಿಲನ್ನೂ ಲೆಕ್ಕಿಸದೇ ಪ್ರಚಾರ ತೀವ್ರಗೊಳಿಸಿದ್ದಾರೆ.
ವಿಜಯಪುರದಿಂದ ಶಿವಮೊಗ್ಗ ಜಿಲ್ಲೆಗೆ ಪ್ರಯಾಣ ಬೆಳೆಸಿದ್ದಾರೆ ಮಾಜಿ ಪ್ರಧಾನಿ ದೇವೇಗೌಡರು. ಇಂದು ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ತೆರಳಿದ್ರು ಮಾಜಿ ಪ್ರಧಾನಿ ದೇವೇಗೌಡರು.
ದೇವೇಗೌಡರಿದ್ದ ಕಾರಿಗೆ ಚಾಲಕನಾಗಿದ್ರು ಶಾಸಕ ದೇವಾನಂದ ಚೌಹಾಣ್. ದೇವೇಗೌಡರನ್ನು ಸ್ವತಃ ಕಾರ್ ಚಾಲನೆ ಮಾಡಿ ಹೆಲಿಪ್ಯಾಡ್ ವರೆಗೂ ಡ್ರಾಪ್ ಮಾಡಿದ್ರು ಶಾಸಕ ದೇವಾನಂದ ಚವ್ಹಾಣ.
ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಅವರಿಂದ ದೇವೇಗೌಡರ ಕಾರ್ ಚಾಲನೆ ಮಾಡಲಾಯಿತು.