Select Your Language

Notifications

webdunia
webdunia
webdunia
webdunia

ಹಾಸನದ ಮತಯಂತ್ರದಲ್ಲಿ ದೋಷ; ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಎ.ಮಂಜು

ಹಾಸನದ ಮತಯಂತ್ರದಲ್ಲಿ ದೋಷ; ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಎ.ಮಂಜು
ಹಾಸನ , ಗುರುವಾರ, 18 ಏಪ್ರಿಲ್ 2019 (10:46 IST)
ಹಾಸನ : ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದ್ದು, ರಾಜ್ಯದ ಕೆಲವೆಡೆ ಮತಯಂತ್ರದಲ್ಲಿ ದೋಷ ಕಂಡುಬಂದಿದೆ.


ಅದೇರೀತಿ ಹಾಸನ ಜಿಲ್ಲೆ ಅರಕಲಗೂಡು ವಿಧಾನಭಾ ಕ್ಷೇತ್ರ ವ್ಯಾಪ್ತಿಯ ಕಟ್ಟೆಪುರದ ಮತಗಟ್ಟೆ 187ರಲ್ಲಿ ಇರುವ ಮತಯಂತ್ರದಲ್ಲಿಯೂ ಸಮಸ್ಯೆ ಕಂಡು ಬಂದಿದ್ದು, 7 ವೋಟು ಹಾಕಿದ್ರೆ 10 ವೋಟು ತೋರಿಸುತ್ತಿತ್ತು.


ಈ ಹಿನ್ನಲೆಯಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಎ.ಮಂಜು ಅವರು ಆಗಮಿಸಿ, ಅಧಿಕಾರಿಗಳ ಜೊತೆ ಮಾತನಾಡಿ, ಜೆಡಿಎಸ್‌ ಗೆ ಹೆಚ್ಚುವರಿ ಮತಗಳು ಹೋಗುತ್ತಿದ್ದು, ಕೂಡಲೇ ಈ ಬಗ್ಗೆ ಅಧಿಕಾರಿಗಳು ಸೂಕ್ತಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಯಲ್ಲಿ ವಂಚಿಸಲು ಮಂಜುನಾಥನ ಫೋಟೋ ಬಳಸಿದರೆ ಶಾಪ ಸಿಗುತ್ತದೆ: ವೀರೇಂದ್ರ ಹೆಗ್ಡೆ