Publish Date: Sat, 20 Apr 2019 (14:01 IST)
Updated Date: Sat, 20 Apr 2019 (14:03 IST)
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಕಾಂಗ್ರೆಸ್ ಸಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾಗೆ ಟ್ವಿಟ್ಟಿಗರು ಸಖತ್ ಟ್ರೋಲ್ ಮಾಡ್ತಿದ್ದಾರೆ.
ನಟಿ ರಮ್ಯಾ ಅವರು ಚುನಾವಣೆಯಲ್ಲಿ ಮತ ಹಾಕದೇ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ತಮ್ಮ ಟ್ವಿಟರ್ ಖಾತೆಯ ಮೂಲಕ ನಟಿ ರಮ್ಯಾರನ್ನ ಕುಟುಕಿರುವ ಸುರೇಶ್ ಕುಮಾರ್, ಕೊನೆಗೂ ಮತದಾನ ಮಾಡುವುದಕ್ಕೆ ಬರದೆ ನಟಿ ರಮ್ಯಾ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಇವರು ಕಾಂಗ್ರೆಸ್ನ ಸೋಷಿಯಲ್ ಮೀಡಿಯಾ ಪ್ರಮುಖರು ಎಂದು ಕಾಲೆಳೆದಿದ್ದಾರೆ.
ರಾಜ್ಯದಲ್ಲಿ ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆ ವೇಳೆಯಲ್ಲಿಯೂ ನಟಿ ರಮ್ಯಾ ಮತದಾನ ಮಾಡಲು ಗೈರಾಗಿದ್ದರು. ಬಳಿಕ ಲೋಕಸಭೆಯ ಉಪಚುನಾವಣೆಯಲ್ಲಿಯೂ ರಮ್ಯಾ ಮತ ಚಲಾಯಿಸಿರಲಿಲ್ಲ. ಇದೀಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಮತದಾನ ಮಾಡದೇ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ನಟಿ ರಮ್ಯಾರ ಹ್ಯಾಟ್ರಿಕ್ ಸಾಧನೆ.