Select Your Language

Notifications

webdunia
webdunia
webdunia
webdunia

ಮತ ಸೆಳೆಯೋಕೆ ಡ್ಯಾನ್ಸ್ ವಾರ್

ಮತ ಸೆಳೆಯೋಕೆ ಡ್ಯಾನ್ಸ್ ವಾರ್
ಬೀದರ್ , ಶುಕ್ರವಾರ, 19 ಏಪ್ರಿಲ್ 2019 (16:29 IST)
ಲೊಕಸಭಾ ಚುನಾವಣೆ ಹಿನ್ನಲೆ ಜನರ ಮತ ಸೆಳೆಯಲು ಇದೀಗ ಅಭ್ಯರ್ಥಿಗಳು ಡ್ಯಾನ್ಸ್ ವಾರ್ ಗೆ ಮೊರೆ ಹೋಗಿದ್ದಾರೆ.

ಕೈ- ಕಮಲ ಅಭ್ಯರ್ಥಿಗಳಿಂದ ಮತ ಸೆಳೆಯಲು ವಿನೂತನ ತಂತ್ರಕ್ಕೆ ಮೊರೆ ಹೋಗಿ ಮಣೆ ಹಾಕಲಾಗುತ್ತಿದೆ. ಡ್ಯಾನ್ಸ್ ಮೂಲಕ ಗಡಿ ಜಿಲ್ಲೆ ಬೀದರ್ ನಲ್ಲಿ ಮತಬೇಟೆಯನ್ನು  ಅಭ್ಯರ್ಥಿಗಳು ನಡೆಸ್ತಿದ್ದಾರೆ. ಬೀದರ್ ನಲ್ಲಿ ಕಮಲ ನಾಯಕರು ಡ್ಯಾನ್ಸ್ ಮಾಡಿಸಿ ಮತಬೇಟೆ ನಡೆಸಿದ್ರು.

ಬೀದರ್ ನ ಪ್ರಮುಖ ಬೀದಿಗಳಲ್ಲಿ ಡ್ಯಾನ್ಸ್ ಮೂಲಕ ಮತಯಾಚನೆ ಮಾಡಲಾಯಿತು. ಇತ್ತ ಈಶ್ವರ ಖಂಡ್ರೆ ತವರು ಕ್ಷೇತ್ರದಲ್ಲೂ ಡ್ಯಾನ್ಸ್ ಮೂಲಕ ಮತಬೇಟೆ ಶುರುಮಾಡಲಾಗಿದೆ.

ರಾಹುಲ್ ಗಾಂಧಿ ಚಿತ್ರ ಇರೋ ಟೀ ಶರ್ಟ್ ಹಾಕಿಕೊಂಡು ಡಾನ್ಸ್ ಮಾಡುತ್ತಿರುವ ಯುವಕರು ಗಮನ ಸೆಳೆಯುತ್ತಿದ್ದಾರೆ. ಹೀಗಾಗಿ ಬೀದರ್ ನಲ್ಲಿ ಮತ ಸೆಳೆಯಲು ನಡೀತಿದೆ ಡಾನ್ಸ್ ವಾರ್.

 

Share this Story:

Follow Webdunia kannada

ಮುಂದಿನ ಸುದ್ದಿ

ನನ್ ಕೆಲಸ ಖುಷಿ ನೀಡಿದೆ ಅಂತ ಅಂದೋರಾರು?