Publish Date: Fri, 19 Apr 2019 (16:19 IST)
Updated Date: Fri, 19 Apr 2019 (16:21 IST)
ಕಳೆದ ಐದು ವರ್ಷಗಳಲ್ಲಿ ನಾನು ಮಾಡಿರುವ ಕೆಲಸ ಸಂತಸ ನೀಡಿದೆ. ಹೀಗಂತ ಕಮಲ ಪಾಳೆಯದ ಮುಖಂಡ ಹೇಳಿದ್ದಾರೆ.
ಕೇಂದ್ರ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಉಜ್ವಲ, ಸ್ಮಾರ್ಟ್ ಬೋರ್ಡ್ ಅಳವಡಿಕೆ. ಕಿಮ್ಸ್ ಆಸ್ಪತ್ರೆಗೆ ಕೇಂದ್ರ ಸರ್ಕಾರದ ಅನುದಾನ, ಮಲ್ಟಿಸ್ಪೆಷಲಾಟಿ ಆಸ್ಪತ್ರೆ ಮಂಜೂರು, ಸರ್ಕಾರಿ ಶಾಲೆಗಳಿಗೆ ಡೆಸ್ಕ್ ನೀಡಿಕೆ ಮೊದಲಾದ ಅಭಿವೃದ್ಧಿಗಳಾಗಿವೆ.
ಐಐಟಿ ಮಂಜೂರು, ಸಿಆರ್ ಎಫ್ ಅನುದಾನ, ಹೈಟೆಕ್ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಕಳೆದ ಐದು ವರ್ಷಗಳಲ್ಲಿ ಮಾಡಿದ ಕಾರ್ಯ ನನಗೆ ಸಂತಸ ತಂದಿದೆ.
ಹೀಗಂತ ಹುಬ್ಬಳ್ಳಿಯಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.