Publish Date: Fri, 19 Apr 2019 (16:08 IST)
Updated Date: Fri, 19 Apr 2019 (16:09 IST)
ಪ್ರಧಾನಿ ಮೋದಿ ಭಾಷಣ ಮಾಡಿದ್ದ ಸ್ಥಳವನ್ನು ಬಿಜೆಪಿಯವರೇ ಸ್ವಚ್ಛಗೊಳಿಸಿದ ಘಟನೆ ನಡೆದಿದೆ.
ನಿನ್ನೆಯಷ್ಟೇ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಕೆ ಎಲ್ ಇ ಕಾಲೇಜು ಮುಂಭಾಗದಲ್ಲಿ ಮೋದಿ ಆಗಮನಕ್ಕೆ ಸಜ್ಜುಗೊಂಡಿದ್ದ ವೇದಿಕೆ ಮತ್ತು ಸುನಾಮಿಯಂತೆ ಹರಿದುಬಂದಿದ್ದ ಜನಸಾಗರವನ್ನ ಕಣ್ಣು ತುಂಬಿಕೊಂಡಿದ್ದರು ಬಿಜೆಪಿಗರು. ಅಭ್ಯರ್ಥಿ ಅಣ್ಣಾಸಾಬ್ ಜೊಲ್ಲೆ ಮತ್ತು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಕಸದಿಂದ ತುಂಬಿಕೊಂಡಿದ್ದ ಆವರಣವನ್ನು ಇಂದು ಸ್ವಚ್ಛಗೊಳಿಸುವ ಮೂಲಕ ಸರಳತೆ ಮೆರೆದರು.
ಮೋದಿ ಭಾಷಣ ಕೇಳಲು ತಂಡೊಪ ತಂಡವಾಗಿ ಹರಿದು ಬಂದ ಜನರು, ಬಿಸಿಲಿನ ಬೇಗೆ ತಾಳದೆ ಬಳಸಿ ಎಸೆದ ನೀರಿನ ಬಾಟಲಿ, ಮಜ್ಜಿಗೆ ಪ್ಯಾಕೆಟ್ ಸೇರಿದಂತೆ ಸ್ಥಳದಲ್ಲಿ ಬಿದ್ದ ಕಸದ ರಾಶಿಯನ್ನು ಚಿಕ್ಕೊಡಿ ಪುರಸಭೆ ಸದಸ್ಯರು, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ್ ಜೊಲ್ಲೆ ಮೈದಾನ ಸ್ವಚ್ಛತೆ ಮಾಡಿದ್ರು.