Publish Date: Fri, 19 Apr 2019 (15:49 IST)
Updated Date: Fri, 19 Apr 2019 (15:51 IST)
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿಯೇ ಸಿದ್ಧ ಅಂತ ನಟ ರಜನಿಕಾಂತ್ ಘೋಷಣೆ ಮಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ನಟ ರಜನಿಕಾಂತ್ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಅದಕ್ಕೆ ಸ್ಪಷ್ಟನೆ ನೀಡಿರುವ ನಟ ರಜನಿಕಾಂತ್, ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಾಗಿ ತಿಳಿಸಿದ್ದಾರೆ.
ಅಷ್ಟೇ ಅಲ್ಲ, ನನ್ನ ಭಾವಚಿತ್ರವನ್ನು ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಯಾರೂ ಬಳಸಿಕೊಳ್ಳಬಾರದು. ನಾನೂ ಯಾವ ಪಕ್ಷದ ಪರ ಪ್ರಚಾರವನ್ನೂ ನಡೆಸುವುದಿಲ್ಲ ಅಂತ ನಟ ರಜನಿಕಾಂತ್ ಹೇಳಿದ್ದಾರೆ. ರಜನಿ ರಾಜಕೀಯ ಎಂಟ್ರಿ ಕುರಿತು ದಶಕದಿಂದ ಚರ್ಚೆ ನಡೆಯುತ್ತಿದೆ.